ವಿಶ್ವ ಸ್ಕಾರ್ಪ್ ದಿನಾಚರಣೆ: ರಸ್ತೆ ಸುರಕ್ಷಾ ಅಭಿಯಾನ

ಉಡುಪಿ, ಆ.3: ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿ ರೇಂಜರ್ ಹಾಗೂ ರೋವರ್ ಘಟಕದ ವತಿಯಿಂದ ನಡೆದ ವಿಶ್ವ ಸ್ಕಾರ್ಪ್ ದಿನಾಚರಣೆಯ ಪ್ರಯುಕ್ತ ರಸ್ತೆ ಸುರಕ್ಷಾ ಅಭಿಯಾನ ಕಾರ್ಯ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷೆ ಮಾಲತಿ ಬಿ.ಆಚಾರ್ಯ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯಡಕ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಾಶ್ ಕೆ. ರಸ್ತೆ ಸುಕ್ಷತೆಯ ಕುರಿತು ಮಾತನಾಡಿದರು.
ರೋವರ್ ಲೀಡರ್ ಅನಿಲ್‌ಕುಮಾರ್ ಕೆ.ಎಸ್. ಹಾಗೂ ರೇಂಜರ್ ಲೀಡರ್ ಸವಿತಾ ಉಪಸ್ಥಿತರಿದ್ದರು. ರೇಂಜರ್ ನಾಯಕಿ ಅಶ್ವಿತಾ ಸ್ವಾಗತಿಸಿ, ಧೀರಜ್ ವಂದಿಸಿದರು. ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಹಿರಿಯಡಕ ಬಸ್‌ನಿಲ್ದಾಣದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
Next Story





