ಮಂಡ್ಯ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯ, ಆ.4: ಪತಿ ಮೃತಪಟ್ಟ ಕೆಲವೇ ಕ್ಷಣದಲ್ಲಿ ಪತ್ನಿಯೂ ಮೃತಪಟ್ಟು, ಸಾವಿನಲ್ಲೂ ದಂಪತಿ ಒಂದಾದ ಘಟನೆ ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹುಲ್ಲಹಳ್ಳಿಯ ಹೊಂಬೇಗೌಡ (70), ಅವರ ಪತ್ನಿ ಮಂಜಮ್ಮ (65) ಸಾವಿನಲ್ಲೂ ಒಂದಾದ ದಂಪತಿ. ಹೊಂಬೇಗೌಡರು ಹೊಟ್ಟೆನೋವಿನಿಂದ ಬಳಲುತ್ತಿದ್ದು ಅವರನ್ನು ಮಳವಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಬಾಯಾರಿಕೆಯಿಂದ ನೀರು ಕೇಳಿದಾಗ ಪತ್ನಿ ಮಂಜಮ್ಮ ಪತಿಗೆ ನೀರು ಕುಡಿಸಿದ್ದಾರೆ. ಇದಾದ ಕೆಲವೇ ಕ್ಷಣದಲ್ಲಿ ಹೊಂಬೇಗೌಡ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಪತಿಯ ಸಾವನ್ನು ಕಣ್ಣಾರೆ ಕಂಡ ಪತ್ನಿ ಮಂಜಮ್ಮ ಕೂಡ ಆಘಾತಗೊಂಡು ಕುಸಿದು ಸಾವನ್ನಪ್ಪಿದ್ದಾರೆ. ದಂಪತಿಯ ಸಾವಿನಿಂದ ಕುಟುಂಬದವರ ಆಕ್ರಂಧನ ಮುಗಿಲುಮುಟ್ಟಿತ್ತು. ಇವರ ಅಂತಿಮ ದರ್ಶನಕ್ಕೆ ಸುತ್ತಮುತ್ತಲ ಗ್ರಾಮಸ್ಥರು ಧಾವಿಸಿದ್ದರು.
Next Story





