ಹನೂರು: ಸ್ವಚ್ಚ ಭಾರತ್ ಬೇಸಿಗೆ ಪ್ರಶಿಕ್ಷಣ ಕಾರ್ಯಕ್ರಮ

ಹನೂರು,ಆ.04: ನಮ್ಮ ಸುತ್ತಮುತ್ತಲ ಸಮಾಜ ಸ್ವಚ್ಚವಾಗಿದ್ದರೆ ಮಾತ್ರ ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ನಡೆಸಬಹುದಾಗಿದೆ ಎಂದು ಗೋಪಿಶೆಟ್ಟಿಯೂರು ಗ್ರಾಮದ ಜೈ ಭೀಮ್ ಯುವಜನ ಕಲಾ ಸಂಘದ ಅಧ್ಯಕ್ಷ ಸುಂದರೇಶ್ ಹೇಳಿದರು.
ಹನೂರು ತಾಲೂಕು ರಾಮಾಪುರ ಹೋಬಳಿ ಗೋಪಿಶೆಟ್ಟಿಯೂರು ಗ್ರಾಮದ ಜೈ ಭೀಮ್ ಯುವಜನ ಕಲಾ ಸಂಘ ಮತ್ತು ನೆಹರು ಯುವಕೇಂದ್ರ ಚಾಮರಾಜನಗರ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚ ಭಾರತ್ ಬೇಸಿಗೆ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಪ್ರತಿಯೊಬ್ಬರೂ ಸಹ ತಮ್ಮ ಸುತ್ತ ಮುತ್ತಲಿರುವ ಪರಿಸರದ ಸ್ವಚ್ಚತೆಯ ಬಗ್ಗೆ ಒತ್ತು ನೀಡಿದಾಗ ಮಾತ್ರ ಸ್ವಚ್ಚ ಭಾರತ್ ಅಭಿಯಾನ ಸಮರ್ಪಕವಾಗಿ ಅನುಷ್ಠಾನಗೂಂಡತೆ ಆಗುತ್ತದೆ ಮತ್ತು ಸಮಾಜದ ಪ್ರತಿಯೊಬ್ಬರೂ ಸಹ ಆರೋಗ್ಯಯುತವಾದ ಜೀವನ ನಡೆಸಿ ಆರ್ಥಿಕವಾಗಿ, ಆರೋಗ್ಯಕರವಾಗಿ ಸಾಮಾಜಿಕವಾಗಿ ಅಭಿವೃದ್ದಿಹೊಂದಬಹುದು ಎಂದು ತಿಳಿಸಿದರು.
ಈ ಸಂದರ್ಭ ರಾಮಾಪುರ, ಗೋಪಿಶೆಟ್ಟಿಯೂರು ಗ್ರಾಮದ ಡಾ.ಅಂಬೇಡ್ಕರ್ ಸಂಘದ ಕಚೇರಿ ಮುಂಬಾಗ ಇರುವ ಒಳ ಚರಂಡಿ ಮುಖ್ಯ ರಸ್ತೆಗಳಲ್ಲಿ ಸ್ವಚ್ಚತೆ ಕಾರ್ಯ ಕೈಗೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ನೆಹರೂ ಯುವ ಕೇಂದ್ರದ ಸಹಾಯಕಿಯಾದ ಉಮಾ ಹಾಗೂ ಸಂಘದ ಸದಸ್ಯರು ಸಾಥ್ ನೀಡಿದರು.





