ಭಾರತದ ವನಿತೆಯರಿಗೆ ಚಿನ್ನ

ಹಾಮದಾನ್, ಆ. 4: ಇರಾನ್‌ನ ಹಾಮದಾನ್ ನಗರದಲ್ಲಿ ಶುಕ್ರವಾರ ಕೊನೆಗೊಂಡ ಏಶ್ಯನ್ ನೇಶನ್ಸ್ ಕಪ್ ಚೆಸ್ ಟೂರ್ನಮೆಂಟ್‌ನಲ್ಲಿ ಭಾರತದ ವನಿತೆಯರ ತಂಡ ಬಿಲಿಟ್ಝ್ ಇವೆಂಟ್‌ನಲ್ಲಿ ಚಿನ್ನ, ರ್ಯಾಪಿಡ್ ಮತ್ತು ಕ್ಲಾಸಿಕಲ್ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದುಕೊಂಡಿದೆ.
ಚೆಸ್ ಟೂರ್ನಮೆಂಟ್ ಜು.28ರಂದು ಆರಂಭಗೊಂಡು ಆ.4ರಂದು ಕೊನೆಗೊಂಡಿತ್ತು. ಹರಿಕಾ ದ್ರೋಣಾವಳಿ, ಈಶಾ ಕರಾವಡೆ, ಪದ್ಮಿನಿ ರಾವತ್, ವೈಶಾಲಿ .ಆರ್ ಮತ್ತು ಆಕಾಂಕ್ಷಾ ಹಾಗವನೆ ನೇತೃತ್ವದ ವನಿತೆಯರ ತಂಡ ಬಿಲಿಟ್ಝ್ ಈವೆಂಟ್‌ನಲ್ಲಿ ಚಿನ್ನ ಗೆದ್ದುಕೊಂಡಿತು.
ಚಿನ್ನ ಜಯಿಸಿದ ಭಾರತದ ಚೆಸ್ ತಂಡದಲ್ಲಿರುವ ಐವರು ಆಟಗಾರ್ತಿಯರ ಪೈಕಿ ಈಶಾ ಮತ್ತು ಪದ್ಮಿನಿ ಇಂಟರ್‌ನ್ಯಾಶನಲ್ ಮಾಸ್ಟರ್ಸ್, ವೈಶಾಲಿ ಮತ್ತು ಆಕಾಂಕ್ಷಾ ವಿಮೆನ್ ಇಂಟರ್‌ನ್ಯಾಶನಲ್ ಮಾಸ್ಟರ್ಸ್ ಮತ್ತು ಹರಿಕಾ ಗ್ರಾಂಡ್ ಮಾಸ್ಟರ್ ಆಗಿದ್ದಾರೆ.
ಭಾರತದ ವನಿತೆಯರು 221.5 ಪಾಯಿಂಟ್ಸ್ ದಾಖಲಿಸಿ ಮೊದಲ ಸ್ಥಾನದೊಂದಿಗೆ ಚಿನ್ನ, ವಿಯೆಟ್ನಾಂ (18.5) ಬೆಳ್ಳಿ ಮತ್ತು ಚೀನಾ (17.5) ಕಂಚು ಪಡೆಯಿತು. ಭಾರತ 2004ರ ಬಳಿಕ ಮೊದಲ ಬಾರಿ ಚಿನ್ನ ಗೆದ್ದುಕೊಂಡಿದೆ. ರ್ಯಾಪಿಡ್ ವಿಭಾಗದಲ್ಲಿ ಭಾರತದ ವನಿತೆಯರ ತಂಡ 17 ಪಾಯಿಂಟ್ಸ್ ದಾಖಲಿಸಿ ಬೆಳ್ಳಿ , ಚೀನಾ (23.5) ಚಿನ್ನ ಮತ್ತು ಇರಾನ್ (17) ಕಂಚು ಪಡೆಯಿತು.
ಕ್ಲಾಸಿಕಲ್ ವಿಭಾಗದಲ್ಲಿ ಭಾರದ ವನಿತೆಯರ ತಂಡ (17.5) ಕಂಚು, ವಿಯೆಟಾಂ್ನ (17.5) ಬೆಳ್ಳಿ ಮತ್ತು ಚೀನಾ (20.5) ಚಿನ್ನ ಬಾಚಿಕೊಂಡಿತು.







