ಕೊಡಂಕೂರು ವಿದ್ಯಾಪೀಠದಲ್ಲಿ ಸಮವಸ್ತ್ರ ವಿತರಣೆ

ಉಡುಪಿ, ಆ.5: ಕೊಡಂಕೂರಿನ ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದಲ್ಲಿ ಸಮವಸ್ತ್ರ ವಿತರಣಾ ಕಾರ್ಯಕ್ರಮವು ಜರಗಿತು.
ಅಧ್ಯಕ್ಷತೆಯನ್ನು ಅಲೆವೂರು ಯೋಗೀಶ ಆಚಾರ್ಯ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರ್ಮೆ ಸುರೇಶ ಶೆಟ್ಟಿ, ವಿಶ್ವಬ್ರಾಹ್ಮಣ ಯುವ ಸಂಘಟನೆ ಕಾಪು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಗಣೇಶ ಆಚಾರ್ಯ ಉಚ್ಚಿಲ ಮುಖ್ಯ ಅತಿಥಿಗಳಾಗಿದ್ದರು.
ವಿಶ್ವನಾಥ ರಾವ್ ದೋಹಾ ಕತಾರ್ ಕೊಡ ಮಾಡಿದ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪ್ರಾಂಶುಪಾಲ ಶ್ರೀಧರ ಭಟ್, ಅಲೆ ವೂರು ನಾಗರಾಜ ಆಚಾರ್ಯ, ಮಹಾಬಲೇಶ್ವರ ಆಚಾರ್ಯ, ಮೋಹನ ಎಂ.ಪಿ, ಪಿ.ಎನ್.ಆಚಾರ್ಯ, ಚಂದ್ರಶೇಖರ್ ಆಚಾರ್ಯ, ಹರೀಶ್ ಆಚಾರ್ಯ ಕಳತ್ತೂರು, ಅಧ್ಯಾಪಕರಾದ ವಿದ್ವಾನ್ ರಾಘವೇಂದ್ರ ಬಿ.ಎನ್., ಪ್ರಶಾಂತ ಆಚಾರ್ಯ ,ವಾರ್ಡನ್ ಅಜಿತ್ ಶರ್ಮ ಮೊದಲಾದವರು ಉಪಸ್ಥಿತರಿದ್ದರು.
ಬಿ.ಎ.ಆಚಾರ್ಯ ಮಣಿಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಪ್ರಸನ್ನ ಸ್ವಾಗತಿಸಿದರು. ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ಏಕಾಂತ ವಂದಿಸಿದರು.
Next Story





