‘ಕಸಾಪ ದತ್ತಿ ಪ್ರಶಸ್ತಿ’ಗೆ ಸಂಗೀತ ವಿದ್ವಾಂಸೆ ಲೀಲಾವತಿ, ಕಲಾವಿದ ವೈಜನಾಥ ಬಿರಾದಾರ್ ಆಯ್ಕೆ
ಬೆಂಗಳೂರು, ಆ.5: ಸಂಗೀತ ವಿದ್ವಾಂಸೆ ಎಚ್.ಆರ್.ಲೀಲಾವತಿಗೆ ಕೆ. ಮೋಹನ್‌ದೇವ್ ಆಳ್ವ ಹಾಗೂ ಡಾ.ಎಂ.ಕೆ.ಶೈಲಜಾ ಆಳ್ವ ದತ್ತಿ ಪ್ರಶಸ್ತಿ ಹಾಗೂ ಚಲನಚಿತ್ರ ಹಿರಿಯ ಕಲಾವಿದ ವೈಜನಾಥ ಬಿರಾದಾರ್‌ಗೆ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವ ನಾಡಿನ ಗಣ್ಯರೊಬ್ಬರಿಗೆ ನೀಡುವ ಕೆ. ಮೋಹನ್‌ದೇವ್ ಆಳ್ವ ಹಾಗೂ ಡಾ.ಎಂ.ಕೆ. ಶೈಲಜಾ ಆಳ್ವ ದತ್ತಿ ಪ್ರಶಸ್ತಿಯು ರೂ. 25ಸಾವಿರ ರೂ. ಹಾಗೂ ಕನ್ನಡ ನಾಟಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ನೀಡುವ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿಯ ಮೊತ್ತ ರೂ. 5ಸಾವಿರ ರೂ. ನಗದು ಪುರಸ್ಕಾರವನ್ನೊಳಗೊಂಡಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





