ಗೋಶಾಲೆಯಲ್ಲಿ ಉಸಿರುಗಟ್ಟಿ 18 ಗೋವುಗಳ ಸಾವು

ಛತ್ತೀಸ್ ಗಢ, ಆ.5: ಇಲ್ಲಿನ ಬಲೋದಾಬಝಾರ್ ಜಿಲ್ಲೆಯ ಗೋಶಾಲೆಯೊಂದರಲ್ಲಿ 18 ಗೋವುಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 18 ಗೋವುಗಳ ಕಳೇಬರವನ್ನು ಸ್ವೀಕರಿಸಲಾಗಿದೆ ಎಂದು ಬಲೋದಾಬಝಾರ್ ಕಲೆಕ್ಟರ್ ಜನಕ್ ಪ್ರಸಾದ್ ಪಾಥಕ್ ತಿಳಿಸಿದ್ದಾರೆ.
ಗ್ರಾಮದಲ್ಲಿ ಗೋವುಗಳ ಮೃತದೇಹವನ್ನು ಹೂಳಲು ಸಿದ್ಧತೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿಯ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. “ಕಳೆದ ಕೆಲದಿನಗಳಿಂದ ಗೋವುಗಳನ್ನು ಕೋಣೆಯೊಂದರಲ್ಲಿ ಕೂಡಿಹಾಕಲಾಗಿತ್ತು. ಉಸಿರುಗಟ್ಟಿ ಅವುಗಳು ಸಾವನ್ನಪ್ಪಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
“4 ದಿನಗಳ ಕಾಲ ಕೋಣೆಯೊಂದರಲ್ಲಿ ಗೋವುಗಳನ್ನು ಕೂಡಿಹಾಕಲಾಗಿತ್ತು. 18 ಗೋವುಗಳಿಗೆ ಬೇಕಾದಷ್ಟು ಸ್ಥಳ ಕೋಣೆಯಲ್ಲಿರಲಿಲ್ಲ. ಆದ್ದರಿಂದ ಉಸಿರುಗಟ್ಟಿ ಅವು ಸಾವನ್ನಪ್ಪಿವೆ” ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
Next Story