ಖಲಿಸ್ತಾನ ಪರ ಕಾರ್ಯಕ್ರಮ ನಿಷೇಧಕ್ಕೆ ಬ್ರಿಟನ್ ಪ್ರಧಾನಿ ನಕಾರ

ಲಂಡನ್, ಆ.5: ಆಗಸ್ಟ್ 12ರಂದು ಲಂಡನ್‌ನಲ್ಲಿ ಖಲಿಸ್ತಾನ ಪರ ಗುಂಪೊಂದು ನಡೆಸಲು ಉದ್ದೇಶಿಸಿರುವ ಕಾರ್ಯಕ್ರಮವನ್ನು ನಿಷೇಧಿಸಬೇಕೆಂಬ ಭಾರತದ ಮನವಿಯನ್ನು ಬ್ರಿಟನ್ ಪ್ರಧಾನಿ ಥೆರೆಸಾ ಮೇ ತಳ್ಳಿಹಾಕಿದ್ದು, ಕಾನೂನಿಗೆ ಸಮ್ಮತವಾಗಿ ಯಾರಿಗೆ ಕೂಡಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಡ್ಡಿಪಡಿಸಲಾಗದು ಎಂದು ತಿಳಿಸಿದ್ದಾರೆ.
ಅಮೆರಿಕ ಮೂಲದ ‘ಸಿಖ್ಸ್ ಫಾರ್ ಜಸ್ಟಿಸ್’ ಎಂಬ ಗುಂಪೊಂದು ಈ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ಲಂಡನ್ ಘೋಷಣೆ ಪ್ರಕಟಿಸುವ ನಿರೀಕ್ಷೆಯಿದೆ.ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಭಾರತದ ವಿದೇಶ ವ್ಯವಹಾರ ಇಲಾಖೆ ಹಾಗೂ ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬ್ರಿಟನ್ ಸರಕಾರಕ್ಕೆ ಪತ್ರ ಬರೆದು ಕೋರಿಕೆ ಸಲ್ಲಿಸಿತ್ತು.
ಇದೀಗ ಬ್ರಿಟನ್ ಸರಕಾರ ಕಾರ್ಯಕ್ರಮ ನಿಷೇಧಿಸಲಾಗದು ಎಂದು ಸ್ಟಷ್ಟಪಡಿಸಿದ್ದು ಸರಕಾರದ ಈ ನಿರ್ಧಾರದ ಬಗ್ಗೆ ಬ್ರಿಟನ್‌ನಲ್ಲಿರುವ ಭಾರತೀಯ ಸಮುದಾಯದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Next Story





