ಇಂಡೋನೇಶ್ಯಾದಲ್ಲಿ ಪ್ರಬಲ ಭೂಕಂಪ; 92 ಬಲಿ
ಡೆನ್ಪಾಸಾರ್, ಆ.6: ಇಂಡೋನೇಶ್ಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 92ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.
ಇಂಡೋನೇಶ್ಯಾದ ರೆಸಾರ್ಟ್ ಐಲ್ಯಾಂಡ್ ಲಾಂಪಾಕ್ ನಲ್ಲಿ ರವಿವಾರ ಭೂಕಂಪ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದೆ.
ಭೂಕಂಪದ ವೇಳೆ ಹಲವು ಕಟ್ಟಡಗಳು ಧರಶಾಯಿಯಾಗಿದೆ. ಸಹಸ್ರಾರು ಮಂದಿ ನೆಲೆ ಕಳೆದುಕೊಂಡಿದ್ದಾರೆ.
ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದ್ದು, ಇನ್ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಹಸ್ರಾರು ಮನೆಗಳಿಗೆ ಭೂಕಂಪದಿಂದ ಹಾನಿಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Next Story