ಬ್ರಾಹ್ಮಣ ಸಭಾ ವತಿಯಿಂದ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ

ಉಡುಪಿ, ಆ.6 ಬ್ರಾಹ್ಮಣ ಸಭಾ ವತಿಯಿಂದ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರವನ್ನು ಕಿನ್ನಿಮೂಲ್ಕಿ ಕನ್ನರಪಾಡಿಯ ಶ್ರೀಜಯಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರವಿವಾರ ಏರ್ಪಡಿಸಲಾಗಿತ್ತು.
ವೈದ್ಯೆ ಡಾ.ರೂಪಶ್ರೀ ರಾವ್ ಅಂಬಲಪಾಡಿ ಶಿಬಿರಾರ್ಥಿಗಳ ಕಣ್ಣಿನ ಪರೀಕ್ಷೆ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ದೇವಳದ ಆಡಳಿತ ಧರ್ಮದರ್ಶಿ ಕೃಷ್ಣಮೂರ್ತಿ ಆಚಾರ್ಯ, ಬ್ರಾಹ್ಮಣ ಸಂಘದ ಅಧ್ಯಕ್ಷ ರಘುಪತಿ ರಾವ್ ಕಿದಿಯೂರ್, ಕಾರ್ಯದರ್ಶಿ ಜನಾರ್ದನ ಭಟ್, ಕೋಶಾಧಿಕಾರಿ ಮುರುಳಿ ಕೃಷ್ಣ ಭಟ್, ರಮಾಕಾಂತ್ ಭಟ್, ಸುಬ್ರಹ್ಮಣ್ಯ ಒಕೂಡ, ನೀರಜಾ ಒಕೂಡ ಮೊದಲಾದವರು ಉಪಸ್ಥಿತರಿದ್ದರು.
Next Story





