ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್: ಮಂಗಳ ತಂಡ ಚಾಂಪಿಯನ್

ಮಂಗಳೂರು, ಆ.6: ಸ್ಪೋಟ್ಸ್ ಡೆನ್ ವತಿಯಿಂದ ನಗರದ ಯು.ಎಸ್.ಮಲ್ಯ ಕ್ರಿಡಾಂಗಣದಲ್ಲಿ ರವಿವಾರ ನಡೆದ ಅವಿಭಜಿತ ದ.ಕ. ಜಿಲ್ಲಾ ಮಟ್ಟದ 'ಮಾಸ್ಟರ್ಸ್ ಇಂಡಿಪೆಂಡೆನ್ಸ್ ಕಪ್' ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಂಗಳ ತಂಡದ ಎ.ಕೆ. ನಿಯಾಝ್ ಹಾಗೂ ರಿಯಾಝ್ ಎ.ಎಚ್. ಚಾಂಪಿಯನ್ ಆಗಿ ಮೂಡಿಬಂದರು.
ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಮಾಜಿ ಪೊಲೀಸ್ ಅಧೀಕ್ಷಕ ಜಯಂತ್ ವಿ. ಶೆಟ್ಟಿ ಹಾಗೂ ಮಾಜಿ ಪೊಲೀಸ್ ಉಪ ಅಧೀಕ್ಷಕ ಚಂದ್ರಶೇಖರ್ ಅವರು ಬಹುಮಾನಗಳನ್ನು ವಿತರಿಸಿದರು.
Next Story





