ಹನೂರು: ಜೆಎಸ್‍ಎಸ್ ಶಾಲೆಯಲ್ಲಿ ಸ್ವಚ್ಚ ಭಾರತ್ ಬೇಸಿಗೆ ಪ್ರಶಿಕ್ಷಣ ಕಾರ್ಯಕ್ರಮ

ಹನೂರು,ಆ.06: ಶಾಲೆಯಲ್ಲಿ ಮಕ್ಕಳಿಗೆ ವಿದ್ಯೆಯನ್ನು ಕಲಿಸುವ ಜೊತೆಗೆ ಪರಿಸರ ಕಾಳಜಿ ಮತ್ತು ಸ್ವಚ್ಚತೆಯ ಕುರಿತು ಪಾಠವನ್ನು ಹೇಳಿ ಕೊಡುವಂತಾರಗಬೇಕು ಎಂದು ಗೋಪಿಶೆಟ್ಟಿಯೂರು ಗ್ರಾಮದ ಜೈ ಭೀಮ್ ಯುವಜನ ಕಲಾ ಸಂಘದ ಅಧ್ಯಕ್ಷ ಸುಂದರೇಶ್ ಹೇಳಿದರು.
ಹನೂರು ತಾಲೂಕು ರಾಮಾಪುರ ಹೋಬಳಿ ಗೋಪಿಶೆಟ್ಟಿಯೂರು ಗ್ರಾಮದ ಜೈ ಭೀಮ್ ಯುವಜನ ಕಲಾ ಸಂಘ ಮತ್ತು ನೆಹರು ಯುವಕೇಂದ್ರ ಚಾಮರಾಜನಗರ ಇವರ ಸಹಯೋಗದಲ್ಲಿ ಜೆಎಸ್‍ಎಸ್ ಶಾಲೆಯ ವಸತಿ ನಿಲಯದ ಹೊರಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚ ಭಾರತ್ ಬೇಸಿಗೆ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಅನಾರೋಗ್ಯಕರ ವಾತಾವರಣ ನಿರ್ಮಾಣವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಪರಿಸರ ಸಮಯತೋಲನದಲ್ಲಿ ಪಾತ್ರ ವಹಿಸುವ ನೆಲ, ಜಲ, ಅರಣ್ಯ ಸೇರಿ ನಮ್ಮ ಸುತ್ತ ಮುತ್ತಲಿನ ಸಮಾಜವನ್ನು ಸ್ವಚ್ಚಂದದಿಂದ ನೋಡಿಕೊಳ್ಳುವಂತೆ ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳಿಗೆ ಪರಿಸರ ಕಾಳಜಿ ಮತ್ತು ಸ್ವಚ್ಚತೆ ಕುರಿತು ನಾವು ತಿಳಿ ಹೇಳಿದರೆ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಸಹ ಆರೋಗ್ಯಯುತ ಜೀವನ ನಡೆಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಮಾಪುರ, ಗ್ರಾಮದ ಜೆಎಸ್‍ಎಸ್ ವಸತಿ ನಿಲಯದ ಮಕ್ಕಳಿಂದ ಗಿಡ ನೆಡುವ ಮುಖಾಂತರ ಸ್ವಚ್ಚತೆ ಕಾರ್ಯ ಕೈಗೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ನೆಹರೂ ಯುವ ಕೇಂದ್ರದ ಸಹಾಯಕಿ ಉಮಾ ಹಾಗೂ ಜೆಎಸ್‍ಎಸ್ ವಸತಿ ಗೃಹದ ವಾರ್ಡನ್ ರಾಜಶೇಖರ್ ಸಂಘದ ಸದಸ್ಯರು ಸಾಥ್ ನೀಡಿದರು.





