ಬೆಂಗಳೂರು: ಎರಡು ಮನೆಗೆ ನುಗ್ಗಿ ಕಳವು
ಬೆಂಗಳೂರು, ಆ.6: ಕುಟುಂಬದವರು ಊರಿಗೆ ಹೋಗಿದ್ದಾಗ ಮನೆಯ ಬೀಗ ಒಡೆದು ಒಳನುಗ್ಗಿದ ದುಷ್ಕರ್ಮಿಗಳು ಚಿನ್ನಾಭರಣ, 20 ಸಾವಿರ ನಗದು ಕಳವು ಮಾಡಿರುವ ಘಟನೆ ಇಲ್ಲಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಗಸಂದ್ರದ ತಿಪ್ಪೇನಹಳ್ಳಿಯ ನಿವಾಸಿ ಜಗದೀಶ್ ಕುಟುಂಬದವರು ಆ.4ರಂದು ಊರಿಗೆ ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಮನೆಯೊಳಗೆ ನುಗ್ಗಿ ಕಳವು ಮಾಡಿದ್ದಾರೆ. ರವಿವಾರ ರಾತ್ರಿ ಜಗದೀಶ್ ಕುಟುಂಬ ಮನೆಗೆ ವಾಪಸ್ಸಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೆಆರ್‌ಪುರ: ಮನೆಯ ಬೀಗ ಒಡೆದು ಒಳನುಗ್ಗಿದ 1 ಕೆಜಿ ಬೆಳ್ಳಿ ಹಾಗೂ 40 ಗ್ರಾಂ ಚಿನ್ನಾಭರಣ, 60 ಸಾವಿರ ನಗದನ್ನು ಕಳವು ಮಾಡಿದ ಘಟನೆ ನಡೆದಿದೆ. ಕೆಆರ್‌ಪುರಂ ನಿವಾಸಿ ಮಂಜುನಾಥ್ ಅವರು ರವಿವಾರ ಬೆಳಗ್ಗೆ 10 ಗಂಟೆಗೆ ಹೊರಗೆ ರಾತ್ರಿ 9 ಗಂಟೆಗೆ ಮನೆಗೆ ವಾಪಸ್ಸು ಆಗುವಷ್ಟರಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಕೆಆರ್‌ಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
Next Story





