ಗುತ್ತಿಗೆಗಳ ವಿಲೇವಾರಿಯಲ್ಲಿ ಲಂಚ: ಭಾರತೀಯನಿಂದ ತಪ್ಪೊಪ್ಪಿಗೆ

ವಾಶಿಂಗ್ಟನ್, ಆ. 7: ಅಮೆರಿಕದ ಸರಕಾರಿ ಕಟ್ಟಡಗಳಲ್ಲಿ ವಿದ್ಯುತ್ ಉಳಿತಾಯ ಯೋಜನೆಗಳ ಅನುಷ್ಠಾನಕ್ಕೆ ಗುತ್ತಿಗೆಗಳನ್ನು ಪಡೆಯಲು ಬಯಸಿದ ಕಂಪೆನಿಗಳಿಂದ 25 ಲಕ್ಷ ಡಾಲರ್ (ಸುಮಾರು 17.17 ಕೋಟಿ ರೂಪಾಯಿ) ಲಂಚ ಸ್ವೀಕರಿಸಿರುವುದನ್ನು ಭಾರತ ಮೂಲದ ವ್ಯಕ್ತಿಯೊಬ್ಬ ಒಪ್ಪಿಕೊಂಡಿದ್ದಾನೆ.
ಫ್ಲೋರಿಡದ ವಿಂಡರ್‌ಮಿಯರ್ ನಿವಾಸಿ 67 ವರ್ಷದ ಭಾಸ್ಕರ್ ಪಟೇಲ್, ಮ್ಯಾಸಚುಸೆಟ್ಸ್ ರಾಜ್ಯದ ಆ್ಯಂಡೋವರ್‌ನಲ್ಲಿರುವ ಶ್ನೈಡರ್ ಇಲೆಕ್ಟ್ರಿಕ್ ಬಿಲ್ಡಿಂಗ್ ಅಮೆರಿಕಾಸ್‌ನಲ್ಲಿ ಸೀನಿಯರ್ ಪ್ರಾಜೆಕ್ಟ್ ಮೆನೇಜರ್ ಆಗಿ ಕೆಲಸ ಮಾಡುತ್ತಿದ್ದಾಗ ಲಂಚ ಪಡೆದಿದ್ದನು.
ವಿದ್ಯುತ್ ಉಳಿತಾಯ ಯೋಜನೆಯೊಂದರಡಿ ಉಪಗುತ್ತಿಗೆದಾರರಿಂದ ಬಿಡ್‌ಗಳನ್ನು ಪಡೆಯುವ ಹಾಗೂ ಉಪಗುತ್ತಿಗೆದಾರರನ್ನು ಆಯ್ಕೆ ಮಾಡುವ ಜವಾಬ್ದಾರಿಯು ಆತನ ಮೇಲಿತ್ತು.
ವಿವಿಧ ಸರಕಾರಿ ಸಂಸ್ಥೆಗಳು 2011 ಜೂನ್ 6 ಮತ್ತು 2016 ಎಪ್ರಿಲ್ 19ರ ನಡುವಿನ ಅವಧಿಯಲ್ಲಿ ಶ್ನೈಡರ್ ಇಲೆಕ್ಟ್ರಿಕ್ ಕಂಪೆನಿಗೆ ನೀಡಿದ ಗುತ್ತಿಗೆಗಳ ಉಪಗುತ್ತಿಗೆದಾರರ ಆಯ್ಕೆಯಲ್ಲಿ ಈ ಭ್ರಷ್ಟಾಚಾರ ನಡೆದಿದೆ.
Next Story





