ಡಿಸಿಎಂ ಪರಮೇಶ್ವರ್‌ರನ್ನು ಭೇಟಿಯಾದ ಜರ್ಮನಿ ಪ್ರತಿನಿಧಿಗಳು

ಬೆಂಗಳೂರು, ಆ.7: ಬೆಂಗಳೂರು ಅಭಿವೃದ್ಧಿ ಹಾಗೂ ಹೊಸಯೋಜನೆಗಳಿಗೆ ನೂತನ ತಂತ್ರಜ್ಞಾನ ಬಳಕೆ ಇತ್ಯಾದಿ ವಿಚಾರಗಳ ಬಗ್ಗೆ ಜರ್ಮನಿ ದೇಶದ ಪ್ರತಿನಿಧಿಗಳಾದ ಪೊಲಿಟಿಕಲ್ ಅಂಡ್ ಕಾರ್ಪೋರೇಟ್ ಅಫೇರ್ಸ್ ಅಡ್ವೈಸರ್ ಅಂಬಿಕಾ ಬನೋತ್ರಾ ಹಾಗೂ ಫೆಡರಲ್ ರಿಪಬ್ಲಿಕ್ ಆಫ್ ಕಾನ್ಸುಲೇಟ್ ಜನರಲ್ ಮಾರ್ಗಿಟ್ ಹೆಲ್ವಿಗ್ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ರನ್ನು ಮಂಗಳವಾರ ವಿಧಾನಸೌಧದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.
ಬೆಂಗಳೂರಿನಲ್ಲಿ ಪ್ರಮುಖ ಸಮಸ್ಯೆ ಎಂದರೆ ವಾಹನ ದಟ್ಟಣೆ, ಕಸ ಹಾಗೂ ರಸ್ತೆ ಕಾಮಗಾರಿಗಳು. ಗುಂಡಿ ಬೀಳದಂಥ ರಸ್ತೆ ನಿರ್ಮಾಣಕ್ಕೆ ಈಗಾಗಲೇ ವೈಟ್ ಟಾಪಿಂಗ್ ಮಾಡಿಸಲಾಗುತ್ತಿದೆ. ಈ ರಸ್ತೆ 25 ವರ್ಷಕ್ಕೂ ಹೆಚ್ಚು ವರ್ಷ ಬಾಳಿಕೆ ಬರಲಿದೆ. ಅದೇ ರೀತಿ ವಾಹನ ದಟ್ಟಣೆ ನಿಯಂತ್ರಣಕ್ಕೂ ಕೇಂದ್ರ ರಚಿಸಿದ್ದೇವೆ ಎಂದು ಪರಮೇಶ್ವರ್ ಹೇಳಿದರು.
ಆದರೂ, ಇನ್ನಷ್ಟು ಪ್ರಬಲವಾದ ಯೋಜನೆಗಳನ್ನು ತರಲು ಉದ್ದೇಶಿಸಿದ್ದೇವೆ. ಜರ್ಮನಿಯಲ್ಲಿನ ಅಭಿವೃದ್ಧಿ ಬಗ್ಗೆ ನಮ್ಮ ತಂಡ ಆಗಮಿಸಿ ಅಧ್ಯಯನ ನಡೆಸಲಿದೆ ಎಂದು ನಿಯೋಗಕ್ಕೆ ಪರಮೇಶ್ವರ್ ಭರವಸೆ ನೀಡಿದರು.
Next Story





