ರಾಜುಲ್ ಹುದಾ ಸೆಕಂಡರಿ ಮದ್ರಸ ಪೆರುವಾಯಿ: ಸುನ್ನಿ ಬಾಲ ಸಂಘದ ವಾರ್ಷಿಕ ಮಹಾಸಭೆ
ಬಂಟ್ವಾಳ, ಆ. 7: ಸುನ್ನೀ ಸಂಘಟನೆಗಳ ಗುರಿಯು ಪರಲೋಕ ಮೋಕ್ಷವಾಗಿದ್ದು, ಆ ಗುರಿಯೆಡೆಗೆ ತಲುಪುವ ಲಕ್ಷದೊಂದಿಗೆ ನಾವು ಕಾರ್ಯಾಚರಿಸ ಬೇಕೆಂದು ಪೆರುವಾಯಿ ಉಸ್ತಾದ್ ಮುಹಮ್ಮದ್ ಶರೀಫ್ ಮದನಿ ಹೇಳಿದ್ದಾರೆ.
ಅವರು ಪೆರುವಾಯಿ ಸಿರಾಜುಲ್ ಹುದಾ ಸೆಕಂಡರಿ ಮದ್ರಸ ಸಭಾಗಂಗಣದಲ್ಲಿ ಇತ್ತೀಚೆಗೆ ನಡೆದ ಸುನ್ನೀ ಬಾಲ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸ್ಥಳೀಯ ಮದ್ರಸದ ಮುಖ್ಯೋಪಾಧ್ಯಾಯ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ ಅವರು ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕ ಮುಹಮ್ಮದ್ ಹಾರಿಸ್ ಹಿಮಾಮಿ ಅವರು ಹಿತವಚನ ನೀಡಿದರು. ಜಮಾತ್ ಸಮಿತಿ ಅಧ್ಯಕ್ಷ ಮಮ್ಮುಹಾಜಿ, ಉಪಾಧ್ಯಕ್ಷ ಜಿಎಂ ಅಬೂಬಕರ್ ಸುನ್ನಿ ಫೈಝಿ, ಪ್ರಧಾನಿ ಕಾರ್ಯದರ್ಶಿ ಹಮೀದ್ ಕಾನ, ಕೋಶಾಧಿಕಾರಿ ಇಸ್ಮಾಯಿಲ್ ಕಾನ ಹಾಗೂ ಸ್ಥಳೀಯ ಎಸ್‌ವೈಎಸ್, ಎಸ್ಸೆಸ್ಸೆಫ್ ನಾಯಕರು ಉಪಸ್ಥಿತರಿದ್ದರು.
ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅನಸ್ ಅವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಮುಹಮ್ಮದ್ ಸಿನಾನ್ ಹಣಕಾಸು ವರದಿ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅನಸ್ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಸಲ್ಮಾನುಲ್ ಫಾರಿಸ್ ವಂದಿಸಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಅಲ್ಹಾಜ್ ಮುಹಮ್ಮದ್ ಶರೀಫ್ ಮದನಿ ಪುಂಜಾಲಕಟ್ಟೆ, ನಿರ್ದೇಶಕರಾಗಿ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ, ಮದಬ್ಬಿರ್ ಆಗಿ ಎಪಿ ಮುಹಮ್ಮದ್ ಹಾರಿಸ್ ಹಿಮಾಮಿ ಪೆರುವಾಯಿ, ಅಧ್ಯಕ್ಷರಾಗಿ ಮುಹಮ್ಮದ್ ಅನಸ್, ಉಪಾಧ್ಯಕ್ಷರಾಗಿ ಮುಹಮ್ಮದ್ ಸಿನಾನ್, ಅಬ್ದುಲ್ಲಾ ಅರ್ಶಾಕ್ ಪ್ರಧಾನ ಕಾರ್ಯದರ್ಶಿಯಾಗಿ ಸಲ್ಮಾನುಲ್ ಫಾರಿಸ್, ಜೊತೆ ಕಾರ್ಯದರ್ಶಿ ಅಬ್ದುಲ್ಲಾ ಅರ್ಶಾಕ್, ಮುಹಮ್ಮದ್ ಜಾಸಿಂ, ಕೋಶಾಧಿಕಾರಿಯಾಗಿ ಅಬೂಬಕರ್ ಸಾಬಿತ್, ಮುಹಮ್ಮದ್ ಅಝ್ಮಾನ್, ಮುಹಮ್ಮದ್ ಶರೀಫ್ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.







