Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ರಕ್ತನಾಳದಲ್ಲಿ ಇನ್ಸುಲಿನ್...

ರಕ್ತನಾಳದಲ್ಲಿ ಇನ್ಸುಲಿನ್ ದುಷ್ಪರಿಣಾಮಗಳಿಗೆ ಮೂಲ ಕಾರಣ: ಮಾಹೆ ಸಂಶೋಧಕರಿಂದ ಪತ್ತೆ

ವಾರ್ತಾಭಾರತಿವಾರ್ತಾಭಾರತಿ7 Aug 2018 10:06 PM IST
share
ರಕ್ತನಾಳದಲ್ಲಿ ಇನ್ಸುಲಿನ್ ದುಷ್ಪರಿಣಾಮಗಳಿಗೆ ಮೂಲ ಕಾರಣ: ಮಾಹೆ ಸಂಶೋಧಕರಿಂದ ಪತ್ತೆ

ಮಣಿಪಾಲ, ಆ.7: ಮಾನವನ ದೇಹದಲ್ಲಿ ಇನ್ಸುಲಿನ್‌ಗೆ ಪ್ರತಿರೋಧ ತೋರುವ ಎಂಡೋಥೀಲಿಯಲ್ ಜೀವಕೋಶದಲ್ಲಿ ಪ್ರಚೋದಕ ಮದ್ಯವರ್ತಿ ಯಾಗಿರುವ ‘ಐಎಲ್-6’ನ ಪ್ರಮುಖ ಜೀನ್ (ಅನುವಂಶಿಕ ಧಾತು)ನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಸ್ಕೂಲ್ ಆಫ್ ಲೈಫ್ ಸಾಯನ್ಸ್ (ಎಸ್‌ಎಲ್‌ಎಸ್) ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

‘ಇದರಿಂದಾಗಿಯೇ ಇನ್ಸುಲಿನ್ ಅಥವಾ ಆ್ಯಂಟಿ ಡಯಾಬಿಟಿಕ್ ಔಷಧಿ ಯಿಂದ ತಮ್ಮ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿರಿಸಿಕೊಂಡಿರುವ ಟೈಪ್ 2 ಡಯಾಬಿಟಿಕ್ (ಟಿ2ಡಿ) ರೋಗಿಗಳು ರಕ್ತನಾಳದ ರೋಗಗಳಿಂದ ನರಳಲು ಕಾರಣವಾಗಿದೆ’ ಎಂದು ಎಸ್‌ಒಎಲ್‌ಎಸ್‌ನ ನಿರ್ದೇಶಕ ಡಾ. ಕೆ. ಸತ್ಯಮೂರ್ತಿ ತಿಳಿಸಿದ್ದಾರೆ.

ಡಾ. ಸತ್ಯಮೂರ್ತಿ ನೇತೃತ್ವದ ತಂಡ ಈ ಸಂಶೋಧನೆಯಲ್ಲಿ ನಿರತವಾಗಿದ್ದು, ಇದಕ್ಕೆ ಕಾರಣವಾಗುವ ಅಂಶವನ್ನು ಪತ್ತೆ ಹಚ್ಚಿದೆ. ಈ ತಂಡದ ಸಂಶೋಧನಾ ವರದಿ ಖ್ಯಾತನಾಮ ವೈಜ್ಞಾನಿಕ ಜರ್ನಲ್ ಆದ ‘ಲ್ಯಾಬೋರೇಟರಿ ಇನ್‌ವೆಸ್ಟಿಗೇಷನ್’ನಲ್ಲಿ ಪ್ರಕಟವಾಗಿದೆ.

ಟಿ2ಡಿ ಮಧುಮೇಹ ರೋಗಿಗಳು ತಮ್ಮ ಗ್ಲುಕೋಸ್ ಮಟ್ಟವನ್ನು ನಿಯಂತ್ರಣ ದಲ್ಲಿರಿಸಿಕೊಂಡಿದ್ದರೂ ಇವರಿಗೆ ಸಾಮಾನ್ಯವಾಗಿ ಕೊಡುವ ಇನ್ಸುಲಿನ್‌ನಿಂದ ರಕ್ತನಾಳಗಳ ಮೇಲೆ ಏಕೆ ? ಹೇಗೆ ? ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಎಸ್‌ಎಲ್‌ಎಸ್ ವಿಜ್ಞಾನಿಗಳು ಸಂಶೋಧನೆ ನಡೆಸಿ ಪತ್ತೆ ಹಚ್ಚಿದ್ದಾರೆ.

ಮಧುಮೇಹಿಗಳಿಗೆ ಮೊದಲು ಔಷಧಿಗಳನ್ನು ಕೊಟ್ಟು ಆ ಹಂತ ದಾಟಿದ ಮೇಲೆ ಇನ್ಸುಲಿನ್ ಕೊಡುವುದು ಕ್ರಮ. ಇದು ಸುದೀರ್ಘ ಪ್ರಕ್ರಿಯೆ. ಈ ಹಂತದಲ್ಲಿ ಇನ್ಸುಲಿನ್ ಕ್ರಮೇಣ ಕಣ್ಣು, ಹೃದಯ, ಕಿಡ್ನಿ ಮುಂತಾದ ಅಂಗಗಳಿಗೆ ಸಮಸ್ಯೆಗಳನ್ನು ತಂದೊಡ್ಡಲು ಕಾರಣವಾಗುತ್ತದೆ. ಇದಕ್ಕೆ ಕಾರಣ ರಕ್ತನಾಳಗಳಲ್ಲಿ ರಕ್ತ ಸರಿಯಾಗಿ ಸರಬರಾಜು ಆಗದೆ ಇರುವುದು. ಈ ಅಂಗಗಳಿಗೆ ರಕ್ತ ಪೂರೈಕೆ ಸರಿಯಾಗದೆ ಇದ್ದರೆ ಇದು ವಿವಿಧ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಏಕೆ ಆಗುತ್ತದೆ? ಹೇಗೆ ಆಗುತ್ತದೆ? ಇದರಿಂದ ಹೊರಬರುವ ಕ್ರಮಗಳೇನು ಎಂಬ ಬಗ್ಗೆ ಎಸ್‌ಎಲ್‌ಎಸ್ ನಿರ್ದೇಶಕ ಡಾ.ಸತ್ಯಮೂರ್ತಿ ನೇತೃತ್ವದ ತಂಡ ಅಧ್ಯಯನ ನಡೆಸಿತ್ತು.

ದುಷ್ಪರಿಣಾಮ ಬೀರಲು ಕಾರಣ ಐಎಲ್6 ಎಂಬ ಇನ್‌ಫ್ಲಾಮೇಟರಿ ಮೊಲೆಕ್ಯುಲ್ ಎಂಬುದು ಪತ್ತೆಯಾಯಿತು. ಇನ್ಸುಲಿನ್ ತೆಗೆದುಕೊಳ್ಳುತಿದ್ದವರಿಗೆ ಐಎಲ್6 ಮೊಲೆಕ್ಯುಲ್ ಜಾಸ್ತಿಯಾಗುತ್ತದೆ. ಇದುವೇ ರಕ್ತನಾಳಗಳ ಕೆಲಸಗಳನ್ನು ಅಸ್ತವ್ಯಸ್ತಗೊಳಿಸುವುದು ಎಂಬುದು ಸಂಶೋಧನೆಯಲ್ಲಿ ಸಾಬೀತಾಗಿದೆ.
ಇನ್ಸುಲಿನ್ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತಿದ್ದು, ಇದು ವಿವಿಧ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದು ಸಂಶೋಧನೆಯ ಪ್ರಮುಖ ಅಂಶವಾಗಿದೆ. ಈಗ ಐಎಲ್6 ದುಷ್ಪರಿಣಾಮವನ್ನು ಕಂಡು ಹಿಡಿದಿದ್ದೇವೆ. ಮುಂದೆ ದುಷ್ಪರಿಣಾಮ ಕಡಿಮೆ ಮಾಡಲು ಔಷಧಿಯನ್ನು ಕಂಡು ಹಿಡಿಯಲಿದ್ದೇವೆ ಎಂದು ಡಾ.ಸತ್ಯಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.

ಇನ್ಸುಲಿನ್ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತಿದ್ದು, ಇದು ವಿವಿಅಂಗಗಳಮೇಲೆದುಷ್ಪರಿಣಾಮಬೀರುತ್ತಿದೆಎಂಬುದುಸಂಶೋನೆಯ ಪ್ರಮುಖ ಅಂಶವಾಗಿದೆ. ಈಗ ಐಎಲ್6 ದುಷ್ಪರಿಣಾಮವನ್ನು ಕಂಡು ಹಿಡಿದಿದ್ದೇವೆ. ಮುಂದೆ ದುಷ್ಪರಿಣಾಮ ಕಡಿಮೆ ಮಾಡಲು ಔಷಧಿಯನ್ನು ಕಂಡು ಹಿಡಿಯಲಿದ್ದೇವೆ ಎಂದು ಡಾ.ಸತ್ಯಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು. ವಿಜ್ಞಾನಿ ಡಾ.ಮಂಜುನಾಥ್ ಬಿ. ಜೋಷಿ ಹಾಗೂ ಪಿಎಚ್‌ಡಿ ಸಂಶೋಧಕ ಅಶ್ವತ್ಥ ಬಾಲಕೃಷ್ಣನ್ ಸಂಶೋಧನ ತಂಡದ ಉಳಿದಿಬ್ಬರು ಸದಸ್ಯರಾಗಿದ್ದಾರೆ.

‘ನಮ್ಮ ವಿಜ್ಞಾನಿಗಳು ನಡೆಸಿದ ಸಂಶೋಧನೆಗಳಿಂದ ಮಧುಮೇಹ ರೋಗಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಮಾಹೆ ಮೊಲಿಕ್ಯೂಲರ್ ಜೆನೆಟಿಕ್ ಸಂಶೋಧನೆಗೆ ವಿಶೇಷ ಪ್ರೋತ್ಸಾಹ ನೀಡುತಿದ್ದು, ರೋಗಿಗಳಿಗೆ ಪ್ರಯೋಜನಕಾರಿಯಾದ ಹಲವು ಸಂಶೋಧನೆಗಳಿಗೆ ಇದರಲ್ಲಿ ಅವಕಾಶಗಳಿವೆ’ ಎಂದು ಮಾಹೆ ಕುಲಪತಿ ಡಾ.ಎಚ್.ವಿನೋ ಭಟ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

‘ನಮ್ಮ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳ ಸಂಶೋಧಕರು ನಡೆಸುವ ಸಂಶೋಧನೆ ಯಿಂದ ಸಮಾಜಕ್ಕೆ ಉಪಯೋಗವಾಗುತ್ತಿದೆ’ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಹರ್ಷ ವ್ಯಕ್ತಪಡಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X