ಮಂಡ್ಯ: ಮೊಬೈಲ್ ಕಳ್ಳರಿಗೆ ಸಾರ್ವಜನಿಕರಿಂದ ಗೂಸಾ
ಮಂಡ್ಯ, ಆ.7: ಮದ್ದೂರು ಸಂತೆಯಲ್ಲಿ ತರಕಾರಿ ಕೊಳ್ಳುತ್ತಿದ್ದ ಗ್ರಾಹಕರಿಂದ ಮೊಬೈಲ್ ಕಸಿಯಲು ಯತ್ನಿಸಿದ ಖದೀಮರಿಗೆ ಸಾರ್ವಜನಿಕರು ಗೂಸಾ ಕೊಟ್ಟ ಪ್ರಕರಣ ಮಂಗಳವಾರ ನಡೆದಿದೆ.
ಮದ್ದೂರಿನ ಮಂಗಳವಾರದ ಸಂತೆ ಜನಪ್ರಿಯ. ಈ ಸಂತೆಯಲ್ಲಿ ಇಬ್ಬರು ಮೊಬೈಲ್ ಕಳ್ಳರು ಗ್ರಾಹಕರಿಂದ ಮೊಬೈಲ್ ಎಗರಿಸಲು ಹೋಗಿ ಸಾರ್ವಜನಿಕರಿಂದ ಗೂಸಾ ತಿಂದು, ಅವರಲ್ಲಿ ಒಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಪಶು ವೈದ್ಯ ಯೋಗೇಶ್ ತರಕಾರಿ ಕೊಳ್ಳುವಾಗ ಅವರ ಮೊಬೈಲ್ ಕಸಿಯಲು ಕಳ್ಳರು ಪ್ರಯತ್ನಿಸಿದ್ದು, ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ಈ ನಡುವೆ ಓರ್ವ ಸಿಕ್ಕಿ ಬಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮದ್ದೂರು ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





