ಬೆಂಗಳೂರು: ಆ.11 ರಂದು ತುಳುಕೂಟದ ವತಿಯಿಂದ ಕಷಾಯ, ಮೆಂತ್ಯ ಗಂಜಿ ವಿತರಣೆ
ಬೆಂಗಳೂರು, ಆ.9: ತುಳುವರ ಬಾಂಧವ್ಯದ ಸಂಕೇತವಾಗಿ ತುಳುಕೂಟದ ವತಿಯಿಂದ ಆ.11 ರಂದು ಪಾಲೆಮರದ ಕಷಾಯ ಮತ್ತು ಮೆಂತ್ಯ ಗಂಜಿಯ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂಟದ ಅಧ್ಯಕ್ಷ ಜಯರಾಮ ಸೂಡ, ಮರದ ಚಕ್ಕೆಗಳಿಂದ ಮಾಡಿದ ಕಷಾಯ ಅತಿಯಾದ ಕಹಿಯಿದ್ದು, ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಆಷಾಢ ತಿಂಗಳ ಅಮಾವಾಸ್ಯೆಯ ದಿನ ಬೆಳಗ್ಗಿನ ವೇಳೆ ಕಷಾಯ ಸೇವನೆ ಮಾಡುವುದರಿಂದ ಕಾಯಿಲೆಗಳು ಬಾರದಂತೆ ತಡೆಯುತ್ತದೆ ಎಂಬ ಸಂಪ್ರದಾಯವಿದೆ ಎಂದು ಹೇಳಿದರು.
ನಗರದ ಮಲ್ಲೇಶ್ವರಂನ 8 ನೆ ಅಡ್ಡರಸ್ತೆಯಲ್ಲಿರುವ ಗಾಂಧಿ ಸಾಹಿತ್ಯ ಭವನದಲ್ಲಿ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕೋರಿದರು. ಮಾಹಿತಿಗಾಗಿ 93412 12789, 95456 59531 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
Next Story





