ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಬೆಳ್ಳಿ ಹಬ್ಬದ ಸಂಭ್ರಮ: ಮನೆ ಮನೆಗೆ ಪುಸ್ತಕ ಹೊಸ ಯೋಜನೆಗೆ ಚಾಲನೆ
ಬೆಂಗಳೂರು, ಆ.9: ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಬೆಳ್ಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಮನೆ ಮನೆಗೆ ಪುಸ್ತಕ ಎಂಬ ನೂತನ ಯೋಜನೆ ರೂಪಿಸಿದೆ.
ಜನರಲ್ಲಿ ಸಾಹಿತ್ಯದ ಕುರಿತು ಆಸಕ್ತಿ ಬೆಳೆಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಪ್ರತಿ ಜಿಲ್ಲೆಯಲ್ಲಿ 25 ಮನೆಗಳನ್ನು ಆಯ್ಕೆ ಮಾಡಿಕೊಂಡು, ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಾಡಿನ ಹಿರಿಯ ಸಾಹಿತಿಗಳು, ಚಿಂತಕರು ಸಾಹಿತ್ಯದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ತಿಳಿಸಿದರು.
25ರ ಸಂಭ್ರಮದ ಹಿನ್ನೆಲೆಯಲ್ಲಿ ಪ್ರಾಧಿಕಾರವನ್ನು ಕಟ್ಟಿ ಬೆಳೆಸಿದ ಅಧ್ಯಕ್ಷರನ್ನು ಸ್ಮರಿಸುವ ಸಲುವಾಗಿ ಅವರ ಸಾಧನೆಗಳನ್ನು ಸಾಕ್ಷಚಿತ್ರ ರೂಪಿಸಲಾಗುತ್ತಿದೆ. ಹಾಗೂ ಈ ಎಲ್ಲ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಲು ಪ್ರಾಧಿಕಾರ ಉದ್ದೇಶಿಸಿದೆ.
Next Story





