ಕುಂದಾಪುರದಲ್ಲಿ ಜೈಲ್‌ಭರೋ ಚಳುವಳಿ

ಕುಂದಾಪುರ, ಆ.9: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳು, ಕಾರ್ಮಿಕ ಕಾನೂನುಗಳ ತಿದ್ದುಪಡಿಯನ್ನು ಕೈಬಿಡಬೇಕು ಹಾಗೂ ರೈತ, ಕೂಲಿ ಕಾರರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಪ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಹಾಗೂ ಕರ್ನಾಟಕ ಪ್ರಂತ ಕೃಷಿ ಕೂಲಿಕಾರರ ಸಂಘ ಗುರುವಾರ ಕುಂದಾಪುರ ದಲ್ಲಿ ಜೈಲ್ ರೋ ಚಳುವಳಿ ನಡೆಸಿತು.
ಕುಂದಾಪುರದ ಶಾಸ್ತ್ರಿ ಸರ್ಕಲ್‌ನಿಂದ ಆರಂಭವಾದ ಬೃಹತ್ ಕಾಲ್ನಡಿಗೆ ಜಾಥಾವು ಕುಂದಾಪುರದ ಮಿನಿ ವಿಧಾನಸೌಧದವರೆಗೂ ನಡೆಯಿತು. ಬಳಿಕ ಅಲ್ಲಿ ವಿವಿಧ ಬೇಡಿಕೆಗಳ ಮನವಿಯನ್ನು ಉಪ ತಹಶೀಲ್ದಾರ್‌ಗೆ ಸಲ್ಲಿಸ ಲಾಯಿತು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕೆ.ಶಂಕರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಸಿಐಟಿಯು ತಾಲೂಕು ಅಧ್ಯಕ್ಷ ಎಚ್.ನರಸಿಂಹ, ಜಿಲ್ಲಾ ಮುಖಂಡರಾದ ಸುರೇಶ್ ಕಲ್ಲಾಗರ, ಮಹಾಬಲ ವಡೇರಹೋಬಳಿ, ಅರುಣ್ ಕುಮಾರ್ ಗಂಗೊಳ್ಳಿ, ಸಂತೋಷ್ ಹೆಮ್ಮಾಡಿ, ಬಲ್ಕಿಸ್, ಜಿ.ಡಿ. ಪಂಜು, ದಾಸು ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
Next Story





