ಮಹಿಳಾ ಕ್ಷೇಮಾಭಿೃದ್ಧಿ/ದೌರ್ಜನ್ಯ ತಡೆ ಸಮಿತಿ ಉದ್ಘಾಟನೆ
ಉಡುಪಿ, ಆ. 9: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿ ಮಹಿಳಾ ಕ್ಷೇಮಾಭಿವೃದ್ಧಿ ಮತ್ತು ದೌರ್ಜನ್ಯ ತಡೆ ಸಮಿತಿಯ ಉದ್ಘಾಟನಾ ಇತ್ತೀಚೆಗೆ ನಡೆಯಿತು.
ಸಮಿತಿಯನ್ನು ಉಡುಪಿ ಮಹಿಳಾ ಪೋಲಿಸ್ ಠಾಣೆಯ ಎಎಸ್‌ಐ ಮುಕ್ತ ಬಾಯಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಾಹನ ಚಲಾಯಿಸುವಾಗ ವಹಿಸ ಬೇಕಾದ ಜಾಗ್ರತೆ, ಇಡಬೇಕಾದ ದಾಖಲೆಗಳು, ಸೈಬರ್ ಕ್ರೈಮ್, ಪೋಕ್ಸೋ ಕಾಯಿದೆ 2012 ಇತ್ಯಾದಿಗಳ ಬ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್.ಹೆಗ್ಡೆ ವಹಿಸಿದ್ದರು. ಮಹಿಳಾ ಕ್ಷೇಮಾಭಿವೃದ್ಧಿ ಮತ್ತು ದೌರ್ಜನ್ಯ ತಡೆ ಸಮಿತಿಯ ಸಂಚಾಲಕಿಯರಾದ ಲಲಿತಾ ಬಿ. ನಾಯಕ್ ಮತ್ತು ಮೇವಿ ಮಿರಾಂದ ಉಪಸ್ಥಿತರಿದ್ದರು. ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕಿ ಶರ್ಮಿಳಾ ಹಾರಾಡಿ ಸ್ವಾಗತಿಸಿ ಮಾಯವ್ವ ವಂದಿಸಿದರು. ವಿಜೇತಾ ಕಾರ್ಯಕ್ರಮ ನಿರೂಪಿಸಿದರು.
Next Story





