ಮಂಡ್ಯ: ಕೆವಿಎಸ್ ಆದರ್ಶ ಮೈಗೂಡಿಸಿಕೊಳ್ಳಲು ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ
ಶಾಸಕ ಎಂ.ಶ್ರೀನಿವಾಸ್‍ಗೆ ಅಭಿನಂದನೆ

ಮಂಡ್ಯ, ಆ.0: ಕರ್ನಾಟಕ ಸಂಘ, ಜಿಲ್ಲಾ ಮುಖ್ಯೋಪಾಧ್ಯಯರ ಸಂಘ, ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಕ್ಷೇತ್ರ ಸಂಪನ್ಮೂಲ ಕೇಂದ್ರ ದಕ್ಷಿಣ ವಲಯದ ವತಿಯಿಂದ ಕೆ.ವಿ.ಶಂಕರಗೌಡರ ಶತಮಾನೋತ್ಸವ ಭವನದಲ್ಲಿ ಗುರುವಾರ ಶಾಸಕ ಎಂ.ಶ್ರೀನಿವಾಸ್ ಅವರನ್ನು ಅಭಿನಂದಿಸಲಾಯಿತು.
ಸಾನಿಧ್ಯವಹಿಸಿದ್ದ ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗಿಂತ ವಿಭಿನ್ನವಾಗಿ ಗುರುತಿಸಿಕೊಳ್ಳಬೇಕಾದರೆ ವ್ಯಕ್ತಿತ್ವ ವಿಭಿನ್ನವಾಗಿರಬೇಕು. ಒಂದು ಕಾಲಕ್ಕೂ ಇನ್ನೊಂದು ಕಾಲಕ್ಕೂ ಗುರುತಿಸಿಕೊಳ್ಳಲು ತನ್ನದೇಯಾದ ಛಾಪು ಮೂಡಿಸಿರಬೇಕು. ಈ ನಿಟ್ಟನಿಲ್ಲಿ ಕೆ.ವಿ.ಶಂಕರಗೌಡರು ಹೆಗ್ಗುರುತು ಮೂಡಿಸಿದ್ದಾರೆ ಎಂದರು.
ಶಂಕರಗೌಡರು ನಾಟಕ, ರಾಜಕೀಯ, ಶಿಕ್ಷಣ ಸೇರಿದಂತೆ ಅನೇಕ ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಇಂದಿನ ರಾಜಕಾರಣಿಗಳು, ಯುವಜನತೆ ಮುಂದುವರೆಯಬೇಕು ಎಂದು ಅವರು ಸಲಹೆ ನೀಡಿದರು.
ಜಯಪ್ರಕಾಶಗೌಡರು ಸಾಂಸ್ಕೃತಿಕ ಕೇಂದ್ರದ ಮೂಲಕ ಸಂಸ್ಕೃತಿಯ ಸಿರಿ ಸಿಂಚನವನ್ನು ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಶ್ರೀನಿವಾಸ್ ಸೇರಿದಂತೆ ಹಲವರು ಕೈ ಜೋಡಿಸಿದ್ದಾರೆ. ಇಂತಹ ಕೆಲಸಗಳ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕರಾದ ಎಚ್.ಹೊನ್ನಪ್ಪ, ಜಿ.ಬಿ.ಶಿವಕುಮಾರ್, ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಉಪಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮಂಜುಳಾ ಉದಯಶಂಕರ್, ಪಿ.ಲೋಕೇಶ್, ಬೋರೇಗೌಡ, ಎಂ.ಕೆ.ಹರೀಶ್‍ಕುಮಾರ್, ಇತರ ಗಣ್ಯರು ಉಪಸ್ಥಿತರಿದ್ದರು.







