ಜಯರಾಮ್, ರಿತುಪರ್ಣಾ ದಾಸ್ ಕ್ವಾರ್ಟರ್ ಫೈನಲ್ ಗೆ
ವಿಯೆಟ್ನಾಂ ಓಪನ್

ಹೋ ಚಿ ಮಿನ್ ಸಿಟಿ, ಆ.9: ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಅಜಯ್ ಜಯರಾಮ್, ರಿತುಪರ್ಣಾ ದಾಸ್ ಮತ್ತು ಮಿಥುನ್ ಮಂಜುನಾಥ್ ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಜಯರಾಮ್ ಅವರು ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಬ್ರೆಝಿಲ್‌ನ ಯೊಗೊರ್ ಕೊಯೆಲ್ಲೊ ವಿರುದ್ಧ 22-20, 21-14 ಅಂತರದಲ್ಲಿ ಜಯ ಗಳಿಸಿದರು.
ಮುಂದಿನ ಪಂದ್ಯದಲ್ಲಿ ಜಯರಾಮ್ ಅವರು ಕೆನಡಾದ ಕ್ಸಿಯಾಡೊಂಗ್ ಶೆಂಗ್‌ರನ್ನು ಎದುರಿಸಲಿದ್ದಾರೆ.
30ರ ಹರೆಯದ ಜಯರಾಮ್ ಅವರು ಕಳೆದ ತಿಂಗಳು ವೈಟ್ ನೈಟ್ಸ್‌ನಲ್ಲಿ ಫೈನಲ್ ತಲುಪಿದ್ದರು. 2015ರಲ್ಲಿ ಕೊರಿಯಾ ಓಪನ್ ಸೂಪರ್ ಸಿರೀಸ್‌ನಲ್ಲಿ ಫೈನಲ್‌ನಲ್ಲಿ ಸೋಲು ಅನುಭವಿಸಿದ್ದರು. ಮಾಜಿ ರಾಷ್ಟ್ರೀಯ ಚಾಂಪಿಯನ್ ರಿತುಪರ್ಣಾ ದಾಸ್ ಅವರು ಮಹಿಳೆಯರ ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ಆರನೇ ಶ್ರೇಯಾಂಕದ ಸಂಗ್ ಶೋವೊ ಯುನ್ ವಿರುದ್ಧ 21-8, 21-14 ಅಂತರದಲ್ಲಿ ಜಯ ಗಳಿಸಿದರು. ಮುಂದಿನ ಸುತ್ತಿನ ಪಂದ್ಯದಲ್ಲಿ ದಾಸ್ ಅವರು ಥಾಯ್ಲೆಂಡ್‌ನ ಫಿಟ್ಟಾಯಾಪೊರ್ನ್ ಚೈವಾನ್‌ರನ್ನು ಸವಾಲು ಎದುರಿಸುವರು.
ಯುವ ಆಟಗಾರ ಮಂಜುನಾಥ್ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್‌ನಲಿ ಥಾಯ್ಲೆಂಡ್‌ನ ಅದ್ಲುರಾಚ್ ನಮಕುಲ್ ವಿರುದ್ಧ 18-21, 21-13, 21-19 ಅಂತರದಲ್ಲಿ ಜಯ ಗಳಿಸಿದರು. ಮಂಜುನಾಥ್ ಅವರು ಚೀನಾದ ರೆ ಝೆಖಿರನ್ನು ಎದುರಿಸುವರು.
ಕಾರ್ತಿಕ್ ಜಿಂದಾಲ್ ಅವರು ಕೆನಡಾದ ಕ್ಸಿಯೊಡೊಂಗ್ ಶೆಂಗ್‌ರನ್ನು ಎದುರಿಸುವರು.
ಜಯರಾಮ್, ರಿತುಪರ್ಣಾ ದಾಸ್ ಕ್ವಾರ್ಟರ್ ಫೈನಲ್‌ಗೆ







