ಮಡಿಕೇರಿ : ಹೊಟೇಲ್‍ನಲ್ಲಿ ಕಳ್ಳತನ
ಮಡಿಕೇರಿ, ಆ.10 :ಹೊಟೇಲ್‍ವೊಂದರ ಹೆಂಚು ತೆಗೆದು ಒಳನುಗ್ಗಿದ ಕಳ್ಳರು, ನಗದು ಮತ್ತು ಮೊಬೈಲ್ ಕಳವು ಮಾಡಿರುವ ಘಟನೆ ನಗರದ ಹೃದಯ ಭಾಗದಲ್ಲಿ ನಡೆದಿದೆ. ನಗರಸಭೆ ಸಂಕೀರ್ಣ ಮುಂಭಾಗದಲ್ಲಿರುವ ಹೊಟೇಲ್ ಹಿಂಬದಿಯ ಅಡುಗೆ ಕೋಣೆಯ ಹೆಂಚು ತೆಗೆದು ಒಳನುಗ್ಗಿ 4 ಸಾವಿರ ನಗದು ಮತ್ತು ಬೆಲೆ ಬಾಳುವ ಮೊಬೈಲನ್ನು ಕದ್ದೊಯ್ದಿದ್ದಾರೆ.
ಪ್ರತಿ ದಿನ ಹೋಟೆಲ್‍ನಲ್ಲಿ ರಾತ್ರಿ ವೇಳೆ ಸಿಬ್ಬಂದಿಗಳು ಮಲಗುತ್ತಿದ್ದರು. ಆದರೆ ಗುರುವಾರ ರಾತ್ರಿ ಹೊಟೇಲ್‍ನಲ್ಲಿ ಯಾರು ಮಲಗಿರಲಿಲ್ಲ. ಈ ಮಾಹಿತಿ ಮತ್ತು ಭಾರಿ ಮಳೆಯ ಲಾಭ ಪಡೆದು ಕಳ್ಳತನ ಮಾಡಲಾಗಿದೆ. ಮೆಣಸಿನ ಪುಡಿ ಮತ್ತು ಸಂಬಾರ ಪದಾರ್ಥಗಳನ್ನು ಹೊಟೇಲ್ ಒಳಗೆ ಚೆಲ್ಲಲಾಗಿದ್ದು, ಕಳ್ಳತನದ ಕುರುಹುಗಳನ್ನು ನಾಶಪಡಿಸುವ ಯತ್ನವನ್ನು ಮಾಡಲಾಗಿದೆ. ಘಟನೆ ಕುರಿತು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





