ವಿಧ್ವಂಸಕ ಕೃತ್ಯ,ದಂಗೆ ಪ್ರಕರಣಗಳಲ್ಲಿ ಹೊಣೆಗಾರಿಕೆಯನ್ನು ನಿಗದಿಗೊಳಿಸಿ: ಸುಪ್ರೀಂ ಕೋರ್ಟ್‌ಗೆ ಎಜಿ ಮನವಿ

ಹೊಸದಿಲ್ಲಿ,ಆ.10: ವಿಧ್ವಂಸಕ ಕೃತ್ಯಗಳು ಮತ್ತು ದಂಗೆಗಳ ಪ್ರಕರಣಗಳಲ್ಲಿ ಪ್ರದೇಶದ ಪೊಲೀಸ್ ಅಧೀಕ್ಷಕರಂತಹ ಅಧಿಕಾರಿಗಳಿಗೆ ಹೊಣೆಗಾರಿಕೆಯನ್ನು ನಿಗದಿಗೊಳಿಸುವಂತೆ ಅಟಾರ್ನಿ ಜನರಲ್(ಎಜಿ) ಕೆ.ಕೆ.ವೇಣುಗೋಪಾಲ ಅವರು ಶುಕ್ರವಾರ ಸರ್ವೋಚ್ಚ ನ್ಯಾಯಾಲಯವನ್ನು ಕೋರಿದರು.
ದೇಶಾದ್ಯಂತ ಪ್ರತಿಭಟನೆಗಳ ಸಂದರ್ಭ ವಿವಿಧ ಗುಂಪುಗಳಿಂದ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳನ್ನು ಧ್ವಂಸಗೊಳಿಸುವ ಗಂಭೀರ ಘಟನೆಗಳಿವೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ಗುಂಪುಗಳಿಂದ ವಿಧ್ವಂಸಕ ಕೃತ್ಯಗಳನ್ನು ತಡೆಯಲು ತಾನು ಮಾರ್ಗಸೂಚಿಗಳನ್ನು ರೂಪಿಸುವುದಾಗಿ ತಿಳಿಸಿತು.
ಹೆಚ್ಚುಕಡಿಮೆ ಪ್ರತಿವಾರ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ದಂಗೆಗಳ ಘಟನೆಗಳು ನಡೆಯುತ್ತಿವೆ ಎಂದು ವಾದಿಸಿದ ವೇಣುಗೋಪಾಲ,ಹಲವಾರು ನಿದರ್ಶನಗಳನ್ನು ನೀಡಿದರು. ಇಂತಹ ಪ್ರತಿಭಟನೆಗಳನ್ನು ನಿಭಾಯಿಸಲು ಹಾಲಿ ಇರುವ ಕಾನೂನಿಗೆ ತಿದ್ದುಪಡಿಯೊಂದನ್ನು ತರಲು ಸರಕಾರವು ಚಿಂತನೆ ನಡೆಸುತ್ತಿದೆ ಎಂದರು.
ನಾವು ಶೀಘ್ರವೇ ಆದೇಶವೊಂದನ್ನು ಹೊರಡಿಸುತ್ತೇವೆ. ನಾವು ತಿದ್ದುಪಡಿಗಾಗಿ ಕಾಯುವುದಿಲ್ಲ. ಇದು ಘೋರ ಸ್ಥಿತಿಯಾಗಿದೆ ಮತ್ತು ಇದು ನಿಲ್ಲಲೇಬೇಕು ಎಂದು ಹೇಳಿದ ಮು.ನ್ಯಾ.ದೀಪಕ ಮಿಶ್ರಾ ನೇತೃತ್ವದ ಪೀಠವು,ಎಫ್‌ಐಆರ್ ಸಲ್ಲಿಸಿರದಿದ್ದರೂ ಖಾಸಗಿ ಆಸ್ತಿಗೆ ಹಾನಿಯು ಗಂಭೀರ ಅಪರಾಧವಾಗಿದೆ ಮತ್ತು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿತು.
ದಿಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಕನ್ವರಿಯಾಗಳು ವಾಹನಗಳಿಗೆ ಹಾನಿಯನ್ನುಂಟು ಮಾಡುತ್ತಿರುವ ವೀಡಿಯೊಗಳನ್ನೂ ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿತು.
ಸಾರ್ವಜನಿಕ ಪ್ರತಿಭಟನೆಗಳ ಹೆಸರಿನಲ್ಲಿ ನಡೆಯುತ್ತ್ತಿರುವ ಹಿಂಸಾಚಾರ ಮತ್ತು ಗೂಂಡಾಗಿರಿಯ ಕೃತ್ಯಗಳನ್ನು ತಡೆಯಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿ ಕೊಡುಂಗಲ್ಲೂರ ಫಿಲ್ಮ್ ಸೊಸೈಟಿಯು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿದೆ. ಪದ್ಮಾವತ್ ಚಿತ್ರದ ವಿರುದ್ಧ ಕರ್ಣಿ ಸೇನಾದ ಪ್ರತಿಭಟನೆಯ







