ಆ.12:ಕೋಟೆಕಾರ್ ಬೀರಿಯಲ್ಲಿ ಪ್ರಜಾಸಂಗಮ
ಮಂಗಳೂರು, ಆ.10: ರಾಜ್ಯ ಸುನ್ನಿ ಯುವಜನ ಸಂಘದ (ಎಸ್‌ವೈಎಸ್) ಕೆ.ಸಿ.ರೋಡ್ ಸೆಂಟರ್ ವತಿಯಿಂದ ‘ಭಾರತ ಭಾರತೀಯರದ್ದಾಗಲಿ’ 72ನೇ ಸ್ವಾತಂತ್ರ್ಯದ ಅಂಗವಾಗಿ ಪ್ರಜಾಸಂಗಮವು ಆ.12ರಂದು ಸಂಜೆ 4:30ಕ್ಕೆ ಕೋಟೆಕಾರ್ ಬೀರಿ ಜಂಕ್ಷನ್‌ನಲ್ಲಿ ನಡೆಯಲಿದೆ.
ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್ ದುಆಗೈಯುವರು. ಸಚಿವ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷ ಎನ್.ಎಸ್. ಉಮರ್ ಮಾಸ್ಟರ್ ಸಭಾಧ್ಯಕ್ಷತೆ ವಹಿಸಲಿರುವರು.
ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ವಿಷಯ ಮಂಡಿಸಲಿದ್ದು, ಶ್ರೀ ಕ್ಷೇತ್ರ ಕೊಂಡಾಣ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಜೇಶ್ ರೈ ಕೋಟೆಕಾರ್ ಗುತ್ತು ಮತ್ತು ಎಐಎಂಐಟಿ ಅಲೋಶಿಯಸ್ ಕೋಟೆಕಾರ್ ಇದರ ನಿರ್ದೇಶಕ ಫಾ. ಡೆಂಝಿಲ್ ಲೋಬೋ ಸಂದೇಶ ಭಾಷಣ ಮಾಡಲಿರುವರು.
ಎಸ್‌ವೈಎಸ್ ಮಂಗಳೂರು ವಲಯಾಧ್ಯಕ್ಷ ಮುಹಮ್ಮದಲಿ ಸಖಾಫಿ ಸುರಿಬೈಲು,ಎಸ್‌ಜೆಎಂ ತಲಪಾಡಿ ರೇಂಜ್ ಅಧ್ಯಕ್ಷ ಅಬ್ದುಲ್ಲ ಮದನಿ, ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಬಾರಿ ಸಅದಿ, ಎಸ್‌ಎಮ್.ಎ. ತಲಪಾಡಿ ರೇಂಜ್ ಅಧ್ಯಕ್ಷ ಎ.ಎಂ. ಅಬ್ಬಾಸ್ ಹಾಜಿ, ಪ್ರೋಗ್ರಾಂ ಸಮಿತಿಯ ಅಧ್ಯಕ್ಷ ಯು.ಬಿ. ಮುಹಮ್ಮದ್ ಹಾಜಿ, ಸೋಮೇಶ್ವರ ಗ್ರಾಪಂ ಅಧ್ಯಕ್ಷ ರಾಜೇಶ್ ಎಸ್. ಉಚ್ಚಿಲ, ತಲಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಆಳ್ವ, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯಕುಮಾರ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಬೀರಿ ಅಧ್ಯಕ್ಷ ರಾಮನಾಥ ಕೋಟೆಕಾರ್, ಬೀರಿ ಕೋಟೆಕಾರು ಯುವಕ ಮಂಡಲದ ಸದಸ್ಯ ಲಿಂಗಪ್ಪ ಗಟ್ಟಿ ಸಂಕೊಳಿಗೆ, ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹಮೀದ್ ಹಸನ್, ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಇಸ್ಮಾಯಿಲ್ ಕೆ.ಸಿ. ನಗರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಪ್ರಯುಕ್ತ ಅಪರಾಹ್ನ 3 ಗಂಟೆಗೆ ಹಿದಾಯತ್ ನಗರದಿಂದ ಬೀರಿ ಜಂಕ್ಷನ್‌ವರೆಗೆ ಜನಜಾಗೃತಿ ಬೈಕ್ ರ್ಯಾಲಿ ಹಾಗೂ ಬೀದಿ ಭಾಷಣ ಮತ್ತು ಬಶೀರ್ ಮದನಿ ಕೂಳೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಎಸ್‌ವೈಎಸ್ ಸೆಂಟರ್ ಕೆ.ಸಿ.ರೋಡ್ ಕಾರ್ಯದರ್ಶಿ ಫಾರೂಕ್ ಬಟ್ಟಪ್ಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







