ಬಸ್ ಢಿಕ್ಕಿ: ಬೈಕ್ ಸವಾರ ಮೃತ್ಯು
ಹೆಬ್ರಿ, ಆ.10: ಬಸ್ಸೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ನಾಡ್ಪಾಲು ಗ್ರಾಮದ ಕಾಸನಮಕ್ಕಿಯ ಅಂಗಡಿಬೆಟ್ಟು ಎಂಬಲ್ಲಿ ಆ.9ರಂದು ಮಧ್ಯಾಹ್ನ 2:35ರ ಸುಮಾರಿಗೆ ನಡೆದಿದೆ.
ಮೃತರನ್ನು ಶಂಕರ ಕುಲಾಲ್ ಎಂದು ಗುರುತಿಸಲಾಗಿದೆ. ಮಾಂಡಿಮೂರುಕೈ ಕಡೆಯಿಂದ ಸೋಮೇಶ್ವರ ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಎದುರುಗಡೆಯಿಂದ ಬರುತ್ತಿದ್ದ ದುರ್ಗಾಂಬಾ ಬಸ್ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರ ಪರಿ ಣಾಮ ಬೈಕ್ ಸಮೇತ ರಸ್ತೆ ಬಿದ್ದು ಗಂಭೀರವಾಗಿ ಗಾಯಗೊಂಡ ಶಂಕರ ಕುಲಾಲ್ ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದು ಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





