ಜ.ಕಾ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ಗೀತಾ ಮಿತ್ತಲ್ ಪ್ರಮಾಣ ವಚನ ಸ್ವೀಕಾರ
ಉನ್ನತ ಹುದ್ದೆಗೇರಿದ ಪ್ರಥಮ ಮಹಿಳೆ
ಶ್ರೀನಗರ,ಆ.11: ಇಲ್ಲಿಯ ರಾಜಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನ್ಯಾ.ಗೀತಾ ಮಿತ್ತಲ್ ಅವರು ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ರಾಜ್ಯಪಾಲ ಎನ್.ಎನ್.ವೋಹ್ರಾ ಅವರಿಂದ ಪ್ರಮಾಣ ವಚನವನ್ನು ಸ್ವೀಕರಿಸಿದರು. ತನ್ಮೂಲಕ ಈ ಹುದ್ದೆಗೇರಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಯನ್ನು ಮುಡಿಗೇರಿಸಿಕೊಂಡರು.
ರಾಜ್ಯಪಾಲರ ಪತ್ನಿ ಉಷಾ ವೋಹ್ರಾ,ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ ಮತ್ತು ಉಮರ್ ಅಬ್ದುಲ್ಲಾ,ರಾಜ್ಯಪಾಲರ ಸಲಹೆಗಾರರು,ಸರ್ವೋಚ್ಚ ನ್ಯಾಯಾಲಯ ಮತ್ತು ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
Next Story