ದಕ್ಷಿಣ ಆಫ್ರಿಕ ‘ಎ’ ತಂಡ 219/3
ಭಾರತ 345 ರನ್‌ಗೆ ಆಲೌಟ್

ಬೆಂಗಳೂರು, ಆ.11: ಎರಡನೇ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ‘ಎ’ ತಂಡ ಭಾರತ ‘ಎ’ ತಂಡದ ವಿರುದ್ಧ 3 ವಿಕೆಟ್‌ಗಳ ನಷ್ಟಕ್ಕೆ 219 ರನ್ ಗಳಿಸಿದೆ.
ಎರಡನೇ ದಿನವಾದ ಶನಿವಾರ ದಕ್ಷಿಣ ಆಫ್ರಿಕ ‘ಎ’ ತಂಡದ ಪರ ಹಂಝಾ 93(125 ಎಸೆತ, 15 ಬೌಂಡರಿ)ಅಗ್ರ ಸ್ಕೋರರ್ ಎನಿಸಿಕೊಂಡರು. ದಕ್ಷಿಣ ಆಫ್ರಿಕ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಆರಂಭಿಕ ಆಟಗಾರ ಮಲಾನ್ ಅವರು ಮುಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಔಟಾದರು. ಆಗ ತಂಡಕ್ಕೆ ಆಸರೆಯಾದ ಹಂಝಾ ಹಾಗೂ ಎರ್ವಿ(58,118 ಎಸೆತ, 7 ಬೌಂಡರಿ, 2 ಸಿಕ್ಸರ್)ಎರಡನೇ ವಿಕೆಟ್‌ಗೆ 154 ರನ್ ಜೊತೆಯಾಟ ನಡೆಸಿದರು. ಈ ಜೋಡಿಯನ್ನು ಸ್ಪಿನ್ನರ್ ಯಜುವೇಂದ್ರ ಚಹಾಲ್(2-62)ಬೇರ್ಪಡಿಸಿದರು. ಮೊದಲಿಗೆ ಹಂಝಾ ವಿಕೆಟ್ ಪಡೆದ ಚಹಾಲ್ ಆ ನಂತರ ಎರ್ವಿಯವರನ್ನು ಎಲ್ಬಿಡಬ್ಲು ಬಲೆಗೆ ಬೀಳಿಸಿದರು.
ದಿನದಾಟದಂತ್ಯಕ್ಕೆ ರೂಡ್ ಸೆಕೆಂಡ್(30) ಹಾಗೂ ವ್ಯಾನ್ ಡೆರ್ ಡುಸ್ಸೆನ್(18) ಕ್ರೀಸ್ ಕಾಯ್ದುಕೊಂಡಿದ್ದಾರೆ.
►ಭಾರತ 345 ರನ್‌ಗೆ ಆಲೌಟ್: ಇದಕ್ಕೆ ಮೊದಲು 4 ವಿಕೆಟ್ ನಷ್ಟಕ್ಕೆ 322 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ 101 ಓವರ್‌ಗಳಲ್ಲಿ 345 ರನ್‌ಗೆ ಆಲೌಟಾಯಿತು. ಔಟಾಗದೆ 138 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಹನುಮ ವಿಹಾರಿ ನಿನ್ನೆಯ ಮೊತ್ತಕ್ಕೆ ಕೇವಲ 10 ರನ್ ಸೇರಿಸಿ ಔಟಾದರು. ಔಟಾಗದೆ 30 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ ಭರತ್ 34 ರನ್ ಗಳಿಸಿ ಔಟಾದರು. ಆ ಬಳಿಕ ಜಯಂತ್ ಯಾದವ್, ಯಜುವೇಂದ್ರ ಚಹಾಲ್, ಸಿರಾಜ್ ಹಾಗೂ ರಾಜ್‌ಪೂತ್ ಬೇಗನೆ ಔಟಾದರು.
ವೇಗದ ಬೌಲರ್ ಡುಯಾನ್ ಒಲಿವಿಯೆರ್ 63 ರನ್‌ಗೆ6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆಫ್ರಿಕದ ಯಶಸ್ವಿ ಬೌಲರ್ ಎನಿಸಿಕೊಂಡರು.







