Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಿಮ್ಮ ಆರ್‌ಸಿ,ಡಿಎಲ್ ಇತ್ಯಾದಿಗಳನ್ನು...

ನಿಮ್ಮ ಆರ್‌ಸಿ,ಡಿಎಲ್ ಇತ್ಯಾದಿಗಳನ್ನು ಡಿಜಿಲಾಕರ್‌ಗೆ ಅಪ್‌ಲೋಡ್ ಮಾಡುವುದು ಹೇಗೆ...?

ವಾರ್ತಾಭಾರತಿವಾರ್ತಾಭಾರತಿ12 Aug 2018 5:34 PM IST
share
ನಿಮ್ಮ ಆರ್‌ಸಿ,ಡಿಎಲ್ ಇತ್ಯಾದಿಗಳನ್ನು ಡಿಜಿಲಾಕರ್‌ಗೆ ಅಪ್‌ಲೋಡ್ ಮಾಡುವುದು ಹೇಗೆ...?

ಅಂತರ್ಜಾಲದ ಆವಿಷ್ಕಾರವು ಜಗತ್ತಿನಾದ್ಯಂತ ಜನರ ಜೀವನಶೈಲಿಯಲ್ಲಿ ಭಾರೀ ಬದಲಾವಣೆಗಳನ್ನು ತಂದಿದೆ. ಮನುಷ್ಯ ಇಂದು ಅಂತರ್ಜಾಲದ ಮೇಲೆ ಎಷ್ಟೊಂದು ಅವಲಂಬಿತನಾಗಿದ್ದಾನೆಂದರೆ ಅದು ಕೇವಲ ಒಂದು ಗಂಟೆ ಇಲ್ಲದಿದ್ದರೂ ಬದುಕುವುದೇ ಕಷ್ಟ ಎಂಬಂತಾಗಿಬಿಟ್ಟಿದೆ!

ಅಂತರ್ಜಾಲದ ಬಳಕೆ ಒಳಿತು ಮತ್ತು ಕೆಡುಕು ಎರಡಲ್ಲಿಯೂ ತನ್ನ ಪಾಲನ್ನು ಹೊಂದಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದರಷ್ಟು ಒಳ್ಳೆಯದು ಬೇರೊಂದಿಲ್ಲ,ಹಲವಾರು ಲಾಭಗಳನ್ನು ನೀಡುತ್ತದೆ. ಡಿಜಿಲಾಕರ್ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

ಏನಿದು ಡಿಜಿಲಾಕರ್ ?

ಡಿಜಿಲಾಕರ್ ಸರಕಾರದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ‘ಡಿಜಿಟಲ್ ಲಾಕರ್’ ಆಗಿದ್ದು,ಭಾರತೀಯ ಪ್ರಜೆಗಳು ತಮ್ಮ ಕೆಲವು ಪ್ರಮುಖ ದಾಖಲೆಗಳನ್ನು ಕ್ಲೌಡ್‌ನಲ್ಲಿ ಸಂಗ್ರಹಿಸಿಡಲು ಅವಕಾಶ ಕಲ್ಪಿಸುತ್ತದೆ. ಜನರು ದಾಖಲೆಗಳನ್ನು ಹೊತ್ತುಕೊಂಡೇ ತಿರುಗಾಡಬೇಕಾದ ಅಗತ್ಯವನ್ನು ಕಡಿಮೆ ಮಾಡುವುದು ಡಿಜಿಲಾಕರ್‌ನ ಉದ್ದೇಶವಾಗಿದ್ದು,ಸರಕಾರದ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿದೆ.

ಡಿಜಿಲಾಕರ್‌ನಲ್ಲಿ ಯಾವೆಲ್ಲ ದಾಖಲೆಗಳನ್ನು ಇಡಬಹುದು ?

 ಶೈಕ್ಷಣಿಕ ಪ್ರಮಾಣಪತ್ರಗಳು,ಪಾನ್ ಕಾರ್ಡ್,ವಾಹನ ಚಾಲನಾ ಪರವಾನಿಗೆ (ಡಿಎಲ್),ವಾಹನದ ಮಾಲಿಕತ್ವ ದಾಖಲೆಗಳು(ಆರ್‌ಸಿ),ಆಧಾರ್ ಕಾರ್ಡ್‌ನಂತಹ ಸರಕಾರಿ ಸಂಸ್ಥೆಗಳು ವಿತರಿಸಿರುವ ಗುರುತು ಚೀಟಿಗಳು ಇತ್ಯಾದಿಗಳನ್ನು ಡಿಜಿಲಾಕರ್‌ನಲ್ಲಿ ಸಂಗ್ರಹಿಸಿಡಬಹುದು.

ಡಿಜಿಲಾಕರ್‌ನಲ್ಲಿ ಸಂಗ್ರಹ ಸ್ಥಳವೆಷ್ಟು ? ಬಳಕೆದಾರರು ಡಿಜಿಲಾಕರ್‌ನಲ್ಲಿ ತಮ್ಮ ದಾಖಲೆಗಳನ್ನು ಸಂಗ್ರಹಿಸಿಡಲು ಒಂದು ಜಿಬಿ ಸ್ಥಳಾವಕಾಶವನ್ನು ನೀಡಲಾಗುತ್ತದೆ.

ಡಿಜಿಲಾಕರ್ ಬಳಕೆಗೆ ಅಗತ್ಯಗಳೇನು ?

 ಡಿಜಿಲಾಕರ್ ಸೌಲಭ್ಯವನ್ನು ಬಳಸಲು ಬಳಕೆದಾರರು ಆಧಾರ್ ಕಾರ್ಡ್‌ನ್ನು ಹೊಂದಿರುವುದು ಅತ್ಯಗತ್ಯವಾಗಿದೆ. ಡಿಜಿಲಾಕರ್‌ಗೆ ಸೈನ್-ಅಪ್ ಆಗಲು ಬಳಕೆದಾರರು ಮೊದಲು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ದಾಖಲಿಸಬೇಕಾಗುತ್ತದೆ. ಈ ಸಂಖ್ಯೆಯನ್ನು ದಾಖಲಿಸಿದ ಬಳಿಕ ಆಧಾರ್‌ನೊಂದಿಗೆ ಜೋಡಣೆಗೊಂಡಿರುವ ಮೊಬೈಲ್ ಸಂಖ್ಯೆಗೆ ಒಂದು ಬಾರಿಯ ಪಾಸ್‌ವರ್ಡ್ (ಒಟಿಪಿ) ರವಾನೆಯಾಗುತ್ತದೆ. ಸೈನ್-ಅಪ್ ಆಗಲು ಈ ಒಟಿಪಿಯನ್ನು ದಾಖಲಿಸಬೇಕಾಗುತ್ತದೆ. ಮುಂದಿನ ಲಾಗ್-ಇನ್‌ಗಳಿಗಾಗಿ ಬಳಕೆದಾರರು ಖಾತೆಯನ್ನು ಫೇಸ್‌ಬುಕ್ ಅಥವಾ ಗೂಗಲ್ ಲಾಗ್-ಇನ್‌ನೊಂದಿಗೆ ಸಂಪರ್ಕಿಸುವ ತಮ್ಮ ಪಾಸ್‌ವರ್ಡ್‌ನ್ನು ರೂಪಿಸಿಕೊಳ್ಳಬಹುದು.

 ಡಿಜಿಲಾಕರ್ ಮತ್ತು ಆಧಾರ್ ಜೋಡಣೆ ಪೂರ್ಣಗೊಂಡ ನಂತರ ನೀವು ‘ಪುಲ್ ಪಾರ್ಟನರ್ ಡಾಕ್ಯಮೆಂಟ್ಸ್’ ವಿಭಾಗವನ್ನು ಪ್ರವೇಶಿಸಬೇಕಾಗುತ್ತದೆ. ಡಿಎಲ್ ಸೇರಿಸುವುದು ಒಳಗೊಂಡಂತೆ ಹಲವಾರು ಕಾರ್ಯಗಳನ್ನು ಆ್ಯಪ್ ನಿಮಗೆ ಸೂಚಿಸುತ್ತದೆ. ಅದನ್ನು ಕ್ಲಿಕ್ಕಿಸಿದರೆ ನಿಮ್ಮ ಹಾಲಿ ಡಿಎಲ್ ಸಂಖ್ಯೆಯೊಂದಿಗೆ ತಂದೆಯ ಅಥವಾ ಪತಿಯ ಹೆಸರಿನ ವಿವರಗಳನ್ನು ತುಂಬುವಂತೆ ಸೂಚಿಸುತ್ತದೆ. ನಿಮ್ಮ ಡಿಎಲ್ ಯಾವುದೇ ರಾಜ್ಯದ್ದಾಗಿರಲಿ,ಅದು ನಿಮಿಷದಲ್ಲಿ ಜೋಡಣೆಗೊಂಡು ಬಳಿಕ 10 ನಿಮಿಷಗಳಲ್ಲಿ ನಿಮ್ಮ ಡಿಜಿಲಾಕರ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಆರ್‌ಸಿ,ಪಾನ್‌ಕಾರ್ಡ್ ಇತ್ಯಾದಿಗಳನ್ನೂ ಇದೇ ರೀತಿಯಲ್ಲಿ ಅಪ್‌ಲೋಡ್ ಮಾಡಹುದು.

ಡಿಜಿಲಾಕರ್‌ನಲ್ಲಿರುವ ಡಿಎಲ್,ಆರ್‌ಸಿ ಇತ್ಯಾದಿ ದಾಖಲೆಗಳು ಕಾನೂನಿನಡಿ ಸ್ವೀಕಾರಾರ್ಹವಾಗಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಈಗಾಗಲೇ ಅಧಿಸೂಚನೆಯನ್ನು ಹೊರಡಿಸಿದೆ. ಡಿಜಿಟಲ್ ಡಿಎಲ್ ಮತ್ತು ಆರ್‌ಸಿಗಳನ್ನು ನಾಗರಿಕರಿಗೆ ಲಭ್ಯವಾಗಿಸಲು ಅದು ಡಿಜಿಲಾಕರ್‌ನೊಂದಿಗೆ ಸಹಭಾಗಿತ್ವವವನ್ನು ಮಾಡಿಕೊಂಡಿದೆ.

ಈ ಸಹಭಾಗಿತ್ವದಡಿ ಈಗ ಡಿಜಿಲಾಕರ್ ದೇಶಾದ್ಯಂತ ಡಿಎಲ್ ಮತ್ತು ಆರ್‌ಸಿ ದತ್ತಾಂಶಗಳ ರಾಷ್ಟ್ರೀಯ ಮಾಹಿತಿ ಕೋಶವಾಗಿರುವ ನ್ಯಾಷನಲ್ ರಿಜಿಸ್ಟರ್‌ನೊಂದಿಗೆ ನೇರ ಸಂಯೋಜನೆಯನ್ನು ಹೊಂದಿದೆ.

ಡಿಜಿಲಾಕರ್ ಬಳಕೆದಾರರೀಗ ತಮ್ಮ ಮೊಬೈಲ್ ಸಾಧನಗಳು ಮತ್ತು ಕಂಪ್ಯುಟರ್‌ಗಳಲ್ಲಿ ಡಿಎಲ್ ಮತ್ತು ಆರ್‌ಸಿಯ ಡಿಜಿಟಲ್ ಆವೃತ್ತಿಯನ್ನು ಸುಲಭವಾಗಿ ಪಡೆಯಬಹುದು.

ಡಿಜಿಟಲ್ ಡಿಎಲ್‌ನ ಉಪಯೋಗಗಳು

 ಡಿಜಿಟಲ್ ಡಿಎಲ್‌ನಿಂದಾಗಿ ಭೌತಿಕ ದಾಖಲೆಗಳ ಬಳಕೆಯು ಕನಿಷ್ಠಗೊಳ್ಳುತ್ತದೆ. ನಾಗರಿಕರು ಅಧಿಕೃತ ಡಿಜಿಟಲ್ ಡಿಎಲ್ ಅನ್ನು ನೇರವಾಗಿ ದತ್ತಾಂಶ ಮೂಲದಿಂದ ಹಂಚಿಕೊಳ್ಳಬಹುದು. ಇತರ ಇಲಾಖೆಗಳಿಗೆ ವಿಳಾಸ ಮತ್ತು ಗುರುತಿನ ಪುರಾವೆಯಾಗಿ ಡಿಜಿಟಲ್ ಡಿಎಲ್ ನೀಡಬಹುದು ಮತ್ತು ಇದರಿಂದಾಗಿ ಆಡಳಿತಾತ್ಮಕ ಕೆಲಸವನ್ನು ಕಡಿಮೆಗೊಳಿಸಬಹುದು.

 ಡಿಜಿಟಲ್ ದಾಖಲೆಗಳ ಮೇಲಿನ ಕ್ಯೂಆರ್ ಕೋಡ್ ಅನ್ನು ಸ್ಕಾನ್ ಮಾಡುವ ಅಥವಾ ಡಿಜಿಲಾಕರ್ ಮೊಬೈಲ್ ಅಪ್ಲಿಕೇಷನ್‌ನನಲ್ಲಿಯ ಕ್ಯೂಆರ್ ಸ್ಕಾನ್ ಸೌಲಭ್ಯವನ್ನು ಬಳಸುವ ಮೂಲಕ ಡಿಜಿಟಲ್ ಡಿಎಲ್ ಅಥವಾ ಆರ್‌ಸಿಯ ಅಧಿಕೃತತೆಯನ್ನು ಸ್ಥಳದಲ್ಲಿ ದೃಢಪಡಿಸಿಕೊಳ್ಳಬಹುದು.

 ಅಗತ್ಯವಿದ್ದಾಗ ಡಿಜಿಟಲ್ ಡಿಎಲ್ ಪಡೆಯಲು ಮೊದಲು ಆಧಾರ್ ಸಂಖ್ಯೆಯನ್ನು ಡಿಜಿಲಾಕರ್ ಖಾತೆಯೊಂದಿಗೆ ಜೋಡಣೆ ಮಾಡಬೇಕು. ನಂತರ ಪುಲ್ ಪಾರ್ಟನರ್ ಡಾಕ್ಯುಮೆಂಟ್ಸ್ ವಿಭಾಗದ ಮೇಲೆ ಕ್ಲಿಕ್ಕಿಸಿ ಇಷ್ಯೂಯರ್,ದಾಖಲೆಯ ವಿಧ ಆಯ್ಕೆ ಮಾಡಿಕೊಂಡು ದಾಖಲೆಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸಿದರೆ ನಿಮ್ಮ ಡಿಎಲ್ ಮಾಹಿತಿ ಕೋಶದಿಂದ ಲಭ್ಯವಾಗುತ್ತದೆ. ಭವಿಷ್ಯದ ಬಳಕೆಗಾಗಿ ಇಷ್ಯೂಡ್ ಡಾಕ್ಯುಮೆಂಟ್ಸ್ ವಿಭಾಗದಡಿ ಈ ಡಿಜಿಟಲ್ ದಾಖಲೆಗೆ ಯುಆರ್‌ಎಲ್ ಅನ್ನು ಸೇವ್ ಮಾಡಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X