ಆಗಸ್ಟ್ 22 (ಬುಧವಾರ) ರಂದು ಬಕ್ರೀದ್: ತ್ವಾಖಾ ಅಹ್ಮದ್ ಮುಸ್ಲಿಯಾರ್

ಮಂಗಳೂರು, ಆ.12: ಕೇರಳದ ಕಾಪಾಡ್ ನಲ್ಲಿ ರವಿವಾರ ಸಂಜೆ ದುಲ್ಹಜ್ ಚಂದ್ರದರ್ಶನ ಆಗಿರುವುದರಿಂದ ಆಗಸ್ಟ್ 22 (ಬುಧವಾರ) ರಂದು ಈದುಲ್ ಅಝ್ಹಾ (ಬಕ್ರೀದ್) ಆಚರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ತೀರ್ಮಾನಿಸಿದ್ದಾರೆ ಎಂದು ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸೀದಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರವಿವಾರ ಚಂದ್ರದರ್ಶನ ಆಗಿರುವುದರಿಂದ ಆಗಸ್ಟ್ 22ಕ್ಕೆ ಬಕ್ರೀದ್ ಆಚರಿಸಲಾಗುವುದು ಎಂದು ಉಡುಪಿ ಜಿಲ್ಲಾ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ತೀರ್ಮಾನಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಂ.ಎ ಬಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





