ಕರ್ನಾಟಕಕ್ಕೆ ಕೇಂದ್ರದಿಂದ ಗಾಯದ ಮೇಲೆ ಬರೆ: ಸಿದ್ದರಾಮಯ್ಯ
ಏರೋ ಇಂಡಿಯಾ ಎತ್ತಂಗಡಿ

ಬೆಂಗಳೂರು, ಆ. 22 : ಎಲ್ಲ ಸೌಲಭ್ಯಗಳಿರುವ ಬೆಂಗಳೂರಿನಿಂದ ಏರೋ ಇಂಡಿಯಾ ಶೋ ಸ್ಥಳಾಂತರಿಸುವುದು ರಾಜ್ಯದ ಗಾಯದ ಮೇಲೆ ಬರೆ ಎಳೆದಂತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯದ ಎಚ್ ಎ ಎಲ್ ನಿಂದ ರಫೇಲ್ ಸಹಿತ ಹಲವು ರಕ್ಷಣಾ ಯೋಜನೆಗಳನ್ನು ಕಿತ್ತುಕೊಂಡಿರುವ ಬಿಜೆಪಿ ಕರ್ನಾಟಕಕ್ಕೆ ನೋವು ಕೊಟ್ಟಿದೆ. ಈಗ ಮತ್ತೆ ಏರೋ ಇಂಡಿಯಾವನ್ನು ಇಲ್ಲಿಂದ ಸ್ಥಳಾಂತರ ಮಾಡುತ್ತಿರುವುದು ಸರಿಯಲ್ಲ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಅವರು ಇದನ್ನು ತಿಳಿದುಕೊಳ್ಳಬೇಕು. ಈ ನಾಡಿನ ಹಿತಾಸಕ್ತಿ ಕಾಪಾಡದೆ ಅದನ್ನು ನಿರ್ಲಕ್ಷಿಸುವುದು ರಾಜ್ಯಕ್ಕೆ ಮಾಡುವ ದ್ರೋಹ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Next Story





