‘ಸಸ್ಯೋತ್ಸವ’ ಉಚಿತ ಕಸಿ ಗಿಡಗಳ ವಿತರಣಾ ಮೇಳ

ಮಣಿಪಾಲ, ಆ.12: ಈಶ್ವರ ನಗರದ ಸ್ನೇಹ ಸಂಗಮದ ವತಿಯಿಂದ ಉಡುಪಿ ಉಪವನ ಗಾರ್ಡನ್ಸ್ ಸಹಭಾಗಿತ್ವದಲ್ಲಿ ‘ಸಸ್ಯೋತ್ಸವ’ ಉಚಿತ ಕಸಿ ಗಿಡಗಳ ವಿತರಣಾ ಮೇಳವನ್ನು ರವಿವಾರ ಮಣಿಪಾಲದಲ್ಲಿ ಆಯೋಜಿಸ ಲಾಗಿತ್ತು.
‘ಸಸ್ಯೋತ್ಸವ’ವನ್ನು ಉದ್ಘಾಟಿಸಿದ ಮಣಿಪಾಲ ಡಾ.ಟಿ.ಎಂ.ಎ.ಪೊಲಿಟೆಕ್ನಿಕ್ ಕಾಲೇಜಿನ ಶೈಕ್ಷಣಿಕ ಸಂಯೋಜಕ ಟಿ.ರಂಗ ಪೈ ಮಾತನಾಡಿ, ನಾವು ಪ್ರೀತಿ ಯಿಂದ ಬೆಳೆಸಿ ಪೋಷಣೆ ಮಾಡಿದ ಗಿಡ ಮರಗಳು ಮುಂದೆ ಮರವಾಗಿ ಬೆಳೆದು ಹಲವು ವಿಧದಲ್ಲಿ ಮನುಷ್ಯನ ಅಂತಿಮ ಕಾಲದ ವರೆಗೂ ಆಸರೆಯಾಗಿ ನಿಲ್ಲುತ್ತವೆ ಮತ್ತು ಮಾನವ ಕುಲಕ್ಕೆ ಸಹಕಾರಿಯಾಗುವಂತಹ ಜಾಗತಿಕ ತಾಪ ಮಾನ ನಿಯಂತ್ರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದರು.
ಸ್ನೇಹ ಸಂಗಮಟ ಸಂಸ್ಥಾಪಕ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಮಹೇಶ್ ಠಾಕೂರ್, ಈಶ್ವರನಗರ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಡಾ.ಯಜ್ಞೆಶ್ ಶರ್ಮ ಮಾತನಾಡಿದರು. ಶಾಸಕ ರಘುಪತಿ ಭಟ್ ಕಾರ್ಯಕ್ರಮಕ್ಕೆ ಭೇಟಿ ನೀಡಿದರು. ಉಪವನ ಗಾರ್ಡನ್ ಸಂಚಾಲಕ ವಾಸುದೇವ್ ಗಡಿಯಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉದ್ಯಮಿ ಕೆ ರಂಜನ್, ಜಿಲ್ಲಾ ರಿಕ್ಷಾ ಚಾಲಕ ಮಾಲಕ ಸಂಘಗಳ ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ್ ಅಮೀನ್, ಮಣಿಪಾಲ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುಬ್ರಾಯ ಆಚಾರ್, ವಾರ್ಡ್ ಸಮಿತಿ ಅಧ್ಯಕ್ಷ ರವೀಂದ್ರನ್ ನಾಯರ್, ಉದ್ಯಮಿ ಪ್ರಸಾದ್ ಶೆಟ್ಟಿ, ಶ್ರಿನಿವಾಸ್ ರಾವ್, ಮಾಧವ ಶಾನ ಭೋಗ್, ಡಾ.ಲಾವಣ್ಯ, ಡಾ.ಅರುಣ್ ಮಯ್ಯ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸತೀಶ್ ಸಾಲಿಯಾನ್ ಉಪಸ್ಥಿತರಿದ್ದರು.
ಅಧ್ಯಕ್ಷ ಹರೀಶ್ ಜಿ.ಕಲ್ಮಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ಕಾರ್ಯಕ್ರಮ ನಿರೂಪಿಸಿದರು. ಸುಮಾರು 8000 ಕ್ಕೂ ಹೆಚ್ಚು ಕಸಿ ಹೂವು ಹಣ್ಣುಹಂಪಲುಗಳು ಮತ್ತು ಅರಣ್ಯ ಸಂಪತ್ತಿನ ಗಿಡ ಳನ್ನು ಉಚಿತವಾಗಿ ವಿತರಿಸಲಾಯಿತು.







