ದಂಪತಿಗೆ ಹಲ್ಲೆ: ಪೊಲೀಸರಿಗೆ ಶರಣಾದ ವೃದ್ಧ ಸಹೋದರ
ಕೊಣಾಜೆ, ಆ. 12: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವೃದ್ದರೋರ್ವರು ತನ್ನ ತಂಗಿ ಮತ್ತು ಬಾವ ಮಲಗಿದ್ದ ಸಂದರ್ಭ ಕಬ್ಬಿಣದ ಸಲಾಕೆಯಲ್ಲಿ ಮಾರಣಾಂತಿಕವಾಗಿ ತಲೆಗೆ ಹಲ್ಲೆಗೈದು ಪೊಲೀಸರಿಗೆ ಶರಣಾದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪಿಕಾಡು ಎರಡನೇ ಅಡ್ಡರಸ್ತೆ ಮಹಾಂಕಾಳಿ ದೈವಸ್ಥಾನದ ಬಳಿ ರವಿವಾರ ನಡೆದಿದೆ.
ಕಾಪಿಕಾಡು ನಿವಾಸಿಗಳಾದ ಜೋಸೆಫ್ (57) ಮತ್ತು ಜಾನೆಟ್ (50) ಹಲ್ಲೆಗೊಳಗಾದವರು. ಜಾನೆಟ್ ಅವರ ಹಿರಿಯ ಸಹೋದರ ಡೆನ್ನಿಸ್ (78) ಎಂಬವರೇ ಹಲ್ಲೆಗೈದು ಪೊಲೀಸರಿಗೆ ಶರಣಾದ ಆರೋಪಿ.
ಆರೋಪಿ ಡೆನ್ನಿಸ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Next Story





