ಕೇರಳದಲ್ಲಿ ಧಾರಾಕಾರ ಮಳೆ ಸುರಿದು ನೆರೆ ಹಾಗೂ ಭೂಕುಸಿತ ಸಂಭವಿಸುತ್ತಿರುವ ನಡುವೆ ಉತ್ತರಾಖಂಡದಲ್ಲಿ ಹಾಗೂ ಒಡಿಶಾ, ಛತ್ತೀಸ್ಗಡ, ತೆಲಂಗಾಣ, ಕರ್ನಾಟಕ, ಪೂರ್ವ ಉತ್ತರಪ್ರದೇಶದ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಈ ರಾಜ್ಯಗಳಲ್ಲಿ ಮುಂದಿನ 3 ದಿನಗಳ ಕಾಲ ತೀವ್ರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.