ಟೊರಂಟೊ ಓಪನ್: ನಡಾಲ್, ಸಿಟ್ಸಿಪಾಸ್ ಫೆನಲ್ಗೆ
ಟೊರಂಟೊ, ಆ.12: ಟೊರಂಟೊ ಓಪನ್ ಮಾಸ್ಟರ್ಸ್ ಟೆನಿಸ್ ವಿಭಾಗದ ಪುರುಷರ ಸಿಂಗಲ್ಸ್ನಲ್ಲಿ ಸ್ಪೇನ್ನ್ ರಫೆಲ್ ನಡಾಲ್ ಫೈನಲ್ ಪ್ರವೇಶಿಸಿದರು.
ಶನಿವಾರ ತಡರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನಡಾಲ್ ಅವರು ರಶ್ಯಾದ ಕರೆನ್ ಕಚನೋವ್ ಅವರನ್ನು 7-6(7/3), 6-4 ಅಂತರದಲ್ಲಿ ಮಣಿಸಿ ಪ್ರಶಸ್ತಿಯ ಸುತ್ತಿಗೆ ತೇರ್ಗಡೆಯಾದರು.
ನಡಾಲ್ ಅವರು ಫೈನಲ್ನಲ್ಲಿ ಗ್ರೀಸ್ನ ಸ್ಟೆಫಾನೊಸ್ ಸಿಟ್ಸಿಪಾಸ್ರನ್ನು ಎದುರಿಸುವರು.
ಸೆಮಿಫೈನಲ್ನಲ್ಲಿ ಸ್ಟೆಫಾನೊಸ್ ಅವರು ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್ರನ್ನು ಮಣಿಸಿದರು.
ಇತ್ತೀಚೆಗೆ ನಡೆದ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಕೆವಿನ್ ಆ್ಯಂಡರ್ಸನ್ ರನ್ನರ್ ಅಪ್ ಆಗಿದ್ದರು.
ಹಾಲೆಪ್, ಸ್ಟೆಫೆನ್ಸ್ ಫೈನಲ್ಗೆ
ಮಹಿಳೆಯರ ಸಿಂಗಲ್ಸ್ನಲ್ಲಿ ಅಮೆರಿಕದ ಸ್ಲೋನ್ ಸ್ಟೆಫೆನ್ಸ್ ಮತ್ತು ಸಿಮೊನಾ ಹಾಲೆಪ್ ಫೈನಲ್ನಲ್ಲಿ ಸೆಣಸಾಡಲಿದ್ದಾರೆ.
ಸಿಮೊನಾ ಹಾಲೆಪ್ ಅವರು ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ವಿರುದ್ಧ 6-4, 6-1 ಅಂತರದಿಂದ ಜಯ ದಾಖಲಿಸಿ ಫೈನಲ್ನಲ್ಲಿ ಅವಕಾಶ ದೃಢಪಡಿಸಿದರು.
ಇನ್ನೊಂದು ಪಂದ್ಯದಲ್ಲಿ ಸ್ಟೆಫೆನ್ಸ್ ಅವರು ಹಾಲಿ ಚಾಂಪಿಯನ್ ಕೆನೆಡಾದ ಎಲಿನಾ ಸ್ವಿಟೊಲಿನಾ ವಿರುದ್ಧ 6-3, 6-3 ಅಂತರದಲ್ಲಿ ಮಣಿಸಿ ಫೈನಲ್ನಲ್ಲಿ ಅವಕಾಶ ಗಿಟ್ಟಿಸಿಕೊಂಡರು.