ಮಹಿಳೆಯ ಮೇಲೆ ಅತ್ಯಾಚಾರ, ಬ್ಲಾಕ್‌ಮೇಲ್ ಪ್ರಕರಣ: ಇಬ್ಬರು ಪಾದ್ರಿಗಳು ನ್ಯಾಯಾಲಯದ ಮುಂದೆ ಶರಣು

ತಿರುವನಂತಪುರ, ಆ. 13: ವಿವಾಹಿತ ಮಹಿಳೆಯ ಮೇಲೆ ಕಳೆದ ಕೆಲವು ವರ್ಷಗಳಿಂದ ಅತ್ಯಾಚಾರ ಎಸಗಿದ ಹಾಗೂ ಬ್ಲಾಕ್‌ಮೇಲ್ ಮಾಡಿದ ಪ್ರಕರಣದ ಆರೋಪಿಗಳಲ್ಲಿ ಕೇರಳದ ಮಲಂಕರ ಆರ್ಥೋಡಾಕ್ಸ್ ಚರ್ಚ್‌ನ ನಾಲ್ವರು ಪಾದ್ರಿಗಳಲ್ಲಿ ಇಬ್ಬರು ಸೋಮವಾರ ಸ್ಥಳೀಯ ನ್ಯಾಯಾಲಯದ ಮುಂದೆ ಶರಣಾಗತರಾಗಿದ್ದಾರೆ. ಇಬ್ಬರು ಪಾದ್ರಿಗಳಾದ ಫಾದರ್ ಸೋನಿ ವರ್ಗೀಸ್ (ಪ್ರಧಾನ ಆರೋಪಿ) ಹಾಗೂ ಫಾದರ್ ಜೈಸೆ ಕೆ. ಜಾರ್ಜ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 6ರಂದು ತಿರಸ್ಕರಿಸಿತ್ತು.
ಆಗಸ್ಟ್ 13ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಹಾಗೂ ಜಾಮೀನು ಕೋರುವಂತೆ ನಿರ್ದೇಶಿಸಿತ್ತು. ತಿರುವಲ್ಲಾ ಜಿಲ್ಲೆಯ ನ್ಯಾಯಾಲಯದಲ್ಲಿ ಈ ಇಬ್ಬರು ಪಾದ್ರಿಗಳು ಸೋಮವಾರ ಶರಣಾಗತರಾಗಿದ್ದಾರೆ. ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಕಿರುಕುಳ ನಡೆಸಿದ ಆರೋಪದಲ್ಲಿ ಮಲಂಕರ ಆರ್ಥೋಡಾಕ್ಸ್ ಚರ್ಚ್‌ನ ಅಬ್ರಹಾಂ ವರ್ಗೀಸ್, ಜಾಬ್ ಮ್ಯಾಥ್ಯೂ, ಡಾ. ಜಾನ್ಸನ್ ಮ್ಯಾಥ್ಯೂ ಹಾಗೂ ಜೈಸೆ ಕೆ. ಜಾರ್ಜ್ ರಾಜ್ಯ ಕ್ರೈಮ್ ಬ್ರಾಂಚ್ ಪ್ರಕರಣ ದಾಖಲಿಸಿತ್ತು ಪಾದ್ರಿಗಳು ವೀಡಿಯೋಗಳನ್ನು ಅಂತರ್‌ಜಾಲದಲ್ಲಿ ಅಪ್‌ಲೋಡ್ ಮಾಡಿದರು ಹಾಗೂ ನನ್ನನ್ನು ಬ್ಲಾಕ್ ಮೇಲ್ ಮಾಡಿದರು ಎಂದು 34 ಹರೆಯದ ವಿವಾಹಿತ ಮಹಿಳೆ ಆರೋಪಿಸಿದ್ದರು. ಫಾದರ್ ಜಾನ್ಸನ್ ಮ್ಯಾಥ್ಯೂ ಹಾಗೂ ಫಾದರ್ ಜಾಬ್ ಮ್ಯಾಥ್ಯೂ ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ.





