ಇಂಡೋನೇಶ್ಯ ಭೂಕಂಪ: 430 ದಾಟಿದ ಮೃತರ ಸಂಖ್ಯೆ

ಜಕಾರ್ತ (ಇಂಡೋನೇಶ್ಯ), ಆ. 13: ಒಂದು ವಾರದ ಹಿಂದೆ ಇಂಡೋನೇಶ್ಯದ ದ್ವೀಪ ಲೊಂಬೊಕ್‌ನ್ನು ನಡುಗಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 430ನ್ನು ದಾಟಿದೆ.
ಅದೇ ವೇಳೆ, ಭೂಕಂಪದಿಂದಾಗಿ ದೇಶ ಅನುಭವಿಸಿರುವ ನಷ್ಟವು ಹಲವು ನೂರು ಮಿಲಿಯ ಡಾಲರ್‌ಗಳಾಗಬಹುದು ಎಂದು ಸರಕಾರ ಅಂದಾಜಿಸಿದೆ.
ಆಗಸ್ಟ್ 5ರಂದು ನಡೆದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 436 ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ. ಹೆಚ್ಚಿನವರು ಕುಸಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.
Next Story





