Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಸಮಾನತೆ ಎನ್ನುವ ಪತಿ-ಪತ್ನಿಯ ನಡುವಿನ...

ಸಮಾನತೆ ಎನ್ನುವ ಪತಿ-ಪತ್ನಿಯ ನಡುವಿನ ತರ್ಕಬದ್ಧ ಸಂಬಂಧ

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ14 Aug 2018 12:07 AM IST
share
ಸಮಾನತೆ ಎನ್ನುವ ಪತಿ-ಪತ್ನಿಯ ನಡುವಿನ ತರ್ಕಬದ್ಧ ಸಂಬಂಧ

ಹೆಣ್ಣು ಮನಸ್ಸು ಅತ್ಯಂತ ವಿಶಿಷ್ಟವಾದುದು ಮತ್ತು ಸೂಕ್ಷ್ಮವಾದುದು. ಕೋಮಲೆಯಾಗಿದ್ದರೂ ಆಕೆ, ಹೆರಿಗೆ ಬೇನೆಯಂತಹ ಅಸಹನೀಯ ನೋವನ್ನು ತಾಳುವ ಶಕ್ತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದ್ದಾಳೆ. ಗಂಡು ಮಾಡಬಲ್ಲ ಬಹುತೇಕ ದುಡಿಮೆಯನ್ನು ಹೆಣ್ಣು ಮಾಡಬಲ್ಲಳು. ಆದರೆ ಹೆಣ್ಣು ಮಾಡಬಲ್ಲ ಕೆಲಸಗಳನ್ನು ಗಂಡು ಮಾಡಲಾರ. ಹೆಣ್ಣು ಗಂಡು ಸಮಾನ ಎನ್ನುವ ಪದವನ್ನು ಹುಟ್ಟಿಸಿ ಹಾಕಿದ್ದೇ ಪುರುಷ. ಹೆಣ್ಣಿನ ಅಸಾಧ್ಯ ಬಲದ ಕುರಿತಂತೆ ಕೀಳರಿಮೆಯಿಂದ ಈ ಪದ ಹುಟ್ಟಿಕೊಂಡಿದೆ. ಯಾವ ರೀತಿಯಲ್ಲಿ ನೋಡಿದರೆ ಹೆಣ್ಣಿಗೆ ಗಂಡು ಸಮನಾಗಲಾರ.
ಗಂಡು ದುಡಿಯಲಿರುವವನು, ಹೆಣ್ಣು ಮನೆಯಲ್ಲಿರಬೇಕಾದವಳು ಎನ್ನುವ ಸಾಲುಗಳು, ಪರೋಕ್ಷವಾಗಿ ಗಂಡಿನ ದುಡಿಮೆಯನ್ನಷ್ಟೇ ಎತ್ತಿ ಹಿಡಿಯುತ್ತದೆ. ದುಡಿಮೆ ಎಂದರೆ ದುಡ್ಡು ಸಂಪಾದಿಸುವುದು ಎಂಬ ಅರ್ಥ ಇರುವುದರಿಂದಲೇ ಹೆಣ್ಣು ಮನೆಯಲ್ಲಿದ್ದು ಮಾಡುವ ಅಸಾಮಾನ್ಯ ಕೆಲಸ ಮಾನ್ಯತೆಯನ್ನು ಪಡೆಯುವುದೇ ಇಲ್ಲ. ಪುರುಷನಲ್ಲಿ ಸಾಧಾರಣವಾಗಿ ಕೇಳುವ ಪ್ರಶ್ನೆ ‘‘ಹೆಂಡತಿ ದುಡಿಯುತ್ತಾಳ?’’ ಈ ಪ್ರಶ್ನೆಯ ಅರ್ಥ ಏನು? ಕಚೇರಿಯಲ್ಲಿ ದುಡಿಯುವ ಹೆಣ್ಣಷ್ಟೇ ದುಡಿಮೆ ಮಾಡುವವಳೆ? ಆಕೆ ಮನೆಯಲ್ಲಿ ತನ್ನ ಮಗುವನ್ನು ಜೋಪಾನ ಮಾಡಿ, ಮನೆಯ ಸರ್ವ ಕೆಲಸಗಳನ್ನು ನಿಭಾಯಿಸುವ ಬೃಹತ್ ಹೊಣೆಗಾರಿಕೆ ನಮ್ಮ ಸಮಾಜದಲ್ಲಿ ಯಾಕೆ ಪರಿಗಣನೆಗೆ ಒಳಗಾಗುತ್ತಿಲ್ಲ. ಹೊರಗೆ ಕಚೇರಿಯಲ್ಲಿ ದುಡಿಯುವ ಹೆಣ್ಣು ಮನೆಯಲ್ಲಿ ಮತ್ತೆ ಮನೆಗೆಲಸ ಮಾಡಬೇಕಾಗುತ್ತದೆ. ಅಂದರೆ ಎರಡೆರಡು ದುಡಿಮೆ. ಈ ನಿಟ್ಟಿನಲ್ಲಿ, ಮನೆಯಲ್ಲಿರುವ ಹೆಣ್ಣಿಗಿಂತ ಹೊರಗೆ ದುಡಿಯುವ ಹೆಣ್ಣೇ ಹೆಚ್ಚು ಶೋಷಿತಳಲ್ಲವೆ? ಮನೆಗೆಲಸವನ್ನು ಗಂಡು-ಹೆಣ್ಣು ಸಮಾನವಾಗಿ ಹಂಚಿ ಮಾಡುವ ಮನಸ್ಥಿತಿ ಭಾರತದಲ್ಲಿ ಯಾಕೆ ಇನ್ನೂ ಬೆಳೆದಿಲ್ಲ?
ಹೀಗೆ ಹೆಣ್ಣಿನ ದುಡಿಮೆಯ ಕುರಿತಂತೆ ಹತ್ತು ಹಲವು ಪ್ರಶ್ನೆಗಳನ್ನು ಇಟ್ಟು ಉತ್ತರಕ್ಕಾಗಿ ತಡಕಾಡುತ್ತದೆ, ರಂಗನಾಯಕಮ್ಮ ಬರೆದಿರುವ ‘ಮನೆಕೆಲಸ ಮತ್ತು ಹೊರಗಿನ ಕೆಲಸ’. ತೆಲುಗು ಮೂಲದ ಈ ಕೃತಿಯನ್ನು ಬಿ. ಸುಜ್ಞಾನ ಮೂರ್ತಿ ಕನ್ನಡಕ್ಕೆ ತಂದಿದ್ದಾರೆ. ಸಂಬಳ, ಕೂಲಿ ಇಲ್ಲದ ಕೆಲಸ ದುಡಿಮೆಯೇ ಅಲ್ಲ ಎಂದು ಭಾವಿಸುವ ಸಮಾಜದಲ್ಲಿ ಮನೆಕೆಲಸ ಮಾಡುವ ಹೆಣ್ಣು ಸಹಜವಾಗಿಯೇ ಶೋಷಣೆಗೆ ಒಳಪಡುತ್ತಾಳೆ ಎಂದು ಈ ಕೃತಿ ಹೇಳುತ್ತದೆ. ಗರ್ಭ ಧರಿಸಿದ ಕಾಲಾವಧಿ, ಬಾಣಂತಿಯರಾದ ಸಮಯ, ಮಕ್ಕಳ ಲಾಲನೆ, ಪೋಷಣೆ, ಮನೆಯ ಒಳಗಿನ ನಿರ್ವಹಣೆ, ಅಡುಗೆಯ ಕಲೆ, ಒಪ್ಪ ಓರಣದ ಕಸುಬುದಾರಿಕೆ ಇವೆಲ್ಲವೂ ಮಹಿಳೆಯ ದುಡಿಮೆಯ ಭಾಗವೇ ಆಗಿದ್ದರೂ, ಪುರುಷ ದೃಷ್ಟಿಕೋನದಲ್ಲಿ ಇವು ಯಾವುದೂ ಕೆಲಸವೇ ಅಲ್ಲ. ಶ್ರಮ ಮತ್ತು ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡು ಈ ಕೃತಿಯನ್ನು ಬರೆಯಲಾಗಿದೆ. ಶ್ರಮದ ಬೇರೆ ಬೇರೆ ವಿಭಾಗಗಳನ್ನು ಲೇಖಕಿ ಗುರುತಿಸುತಾರೆೆ. ಜೊತೆ ಜೊತೆಗೆ ಗಂಡ-ಹೆಂಡತಿಯರ ಶ್ರಮ ಸಂಬಂಧಗಳನ್ನು ಮನಶ್ಶಾಸ್ತ್ರೀಯವಾಗಿಯೂ ನೋಡುವ ಪ್ರಯತ್ನ ಮಾಡುತ್ತಾರೆ. ಶ್ರಮವಿಭಜನೆಯೇ ಹೆಣ್ಣಿನ ಶೋಷಣೆಗೆ ಮೂಲ ಕಾರಣ ಎನ್ನುವುದನ್ನು ಅವರು ಕಂಡುಕೊಳ್ಳುತ್ತಾರೆ. ಮನೆಯ ಶ್ರಮ ವಿಭಜನೆ ಬದಲಾಗಬೇಕಾದರೆ ಹೊರಗಿನ ಶ್ರಮ ವಿಭಜನೆ ಬದಲಾಗಬೇಕು ಎಂದು ಅವರು ಅಭಿಪ್ರಾಯಪಡುತ್ತಾರೆ. ಶ್ರಮವನ್ನು ಹಿನ್ನೆಲೆಯಾಗಿಟ್ಟು ಅಸಮಾನತೆಯನ್ನು ಚರ್ಚಿಸುವ ಲೇಖಕಿ, ಹೇಗೆ ಶ್ರಮದ ವಿಭಜನೆ ಮಹಿಳೆಯನ್ನು ಶೋಷಿಸುತ್ತಿದೆ ಎನ್ನುವುದನ್ನು ಹೇಳುತ್ತಾರೆ. ಮಹಿಳೆಯರು ಮನೆ ಕೆಲಸದಿಂದ ಹೊರಗಿನ ಕೆಲಸಕ್ಕೆ ಬರಬೇಕು. ಪುರುಷರು ಹೊರಗಿನ ಕೆಲಸದಿಂದ ಮನೆ ಕೆಲಸಕ್ಕೆ ಬರಬೇಕು. ಮನೆಕೆಲಸಕ್ಕೂ ಹೊರಗಿನ ಕೆಲಸಕ್ಕೂ ಇರುವ ತರ್ಕಬದ್ಧವಾದ ಸಂಬಂಧವೇ ಸ್ತ್ರೀ ಪುರುಷ ಸಮಾನತೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಲಡಾಯಿ ಪ್ರಕಾಶನ ಗದಗ ಇವರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 120. ಮುಖಬೆಲೆ 80 ರೂ.

 

share
ಕಾರುಣ್ಯಾ
ಕಾರುಣ್ಯಾ
Next Story
X