ಕಣ್ಣು
![ಕಣ್ಣು ಕಣ್ಣು](https://www.varthabharati.in/sites/default/files/images/articles/2018/08/14/147976.jpg)
ಆ ಹಿರಿಯರ ಎರಡೂ ಕಣ್ಣುಗಳು ವಯಸ್ಸಿನ ಕಾರಣದಿಂದ ಕುರುಡಾದವು.
ಯಾರೋ ಕೇಳಿದರು ‘‘ನಿಮಗೆ ನೋಡುವುದಕ್ಕೆ ಸಾಧ್ಯವಾಗದೇ ಇರುವುದರಿಂದ ಬೇಜಾರಾಗುವುದಿಲ್ಲವೇ?’’
ಹಿರಿಯರು ಹೇಳಿದರು ‘‘ಕಣ್ಣು ತೆರೆದು ನೋಡುವುದಕ್ಕೆ ಸಾಧ್ಯವಾಗುವಂತೆ, ಕಣ್ಣು ಮುಚ್ಚಿ ನೋಡುವುದಕ್ಕೂ ಸಾಧ್ಯವಿದೆ ಎನ್ನುವುದು ಗೊತ್ತಾಗಿದೆ. ಈಗಲೂ ನನಗೆ ಬದುಕಿನ ಹಲವು ಸತ್ಯಗಳು ಕಾಣುತ್ತಿವೆ. ನಾನು ನೋಡುತ್ತಿದ್ದೇನೆ...’’
Next Story