Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸುರತ್ಕಲ್ ಟೋಲ್ ನವೀಕರಣದ ವಿರುದ್ಧ ವಿವಿಧ...

ಸುರತ್ಕಲ್ ಟೋಲ್ ನವೀಕರಣದ ವಿರುದ್ಧ ವಿವಿಧ ಸಂಘಟನೆಗಳ ಧರಣಿ

ವಾರ್ತಾಭಾರತಿವಾರ್ತಾಭಾರತಿ14 Aug 2018 6:13 PM IST
share
ಸುರತ್ಕಲ್ ಟೋಲ್ ನವೀಕರಣದ ವಿರುದ್ಧ ವಿವಿಧ ಸಂಘಟನೆಗಳ ಧರಣಿ

ಮಂಗಳೂರು, ಆ.14: ಸುರತ್ಕಲ್‌ನಲ್ಲಿರುವ ಅಕ್ರಮ ಟೋಲ್‌ಗೇಟ್‌ನ ಗುತ್ತಿಗೆಯನ್ನು ನವೀಕರಣಗೊಳಿಸುವ ಪ್ರಕ್ರಿಯೆಯನ್ನು ವಿರೋಧಿಸಿ ಮತ್ತು ಹೆದ್ದಾರಿ ಕಾಮಗಾರಿ ವಿಳಂಬವನ್ನು ಖಂಡಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಸುರತ್ಕಲ್ ಟೋಲ್‌ಗೇಟ್ ಮುಂದೆ ಧರಣಿ ನಡೆಯಿತು.

ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಹಾಗೂ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ‘ಇದು ಟೋಲ್‌ಗೇಟ್ ಕೇಂದ್ರ ಅಲ್ಲ, ಸಂಸದ ನಳಿನ್ ಕುಮಾರ್ ಕಟೀಲ್ ಕೃಪಾಪೋಷಿತ ಲೂಟಿ ಕೇಂದ್ರವಾಗಿದೆ. ಇಲ್ಲಿ ಕ್ರಿಮಿನಲ್‌ಗಳೇ ವಸೂಲಿಗೆ ನಿಂತಿದ್ದಾರೆ. ಒಂದೆಡೆ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಮಾತನಾಡುವ ನಳಿನ್ ಇನ್ನೊಂದೆಡೆ ಗುತ್ತಿಗೆ ವಹಿಸಿಕೊಂಡ ನವಯುಗ ಕಂಪೆನಿಯೊಂದಿಗೆ ಶಾಮೀಲಾಗಿದ್ದಾರೆ. ಅವರ ಕೃಪೆಯಿಂದಲೇ ಟೋಲ್ ಗುತ್ತಿಗೆ ನವೀಕರಣಗೊಂಡಿದೆ. ಹಾಗಾಗಿ ನಳಿನ್‌ಗೆ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ವಿಳಂಬ ಹಾಗೂ ಟೋಲ್‌ಗೇಟ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.

ಕಾರ್ಪೊರೇಟರ್‌ಗಳಾದ ದಯಾನಂದ ಶೆಟ್ಟಿ, ರೇವತಿ ಪುತ್ರನ್ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದರು. ಡಿವೈಎಫ್‌ಐ ಸುರತ್ಕಲ್ ವಲಯ, ಕಿನ್ನಿಗೋಳಿ-ಮುಲ್ಕಿ ವಲಯ ಲಾರಿ ಮಾಲಕರ ಸಂಘ, ದ.ಕ. ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಚಾಲಕರ ಮಾಲಕರ ಎಸೋಸಿಯೇಶನ್, ಜಯಕರ್ನಾಟಕ ಸುರತ್ಕಲ್ ವಲಯ, ಗೂಡ್ಸ್ ಟೆಂಪೋ ಚಾಲಕರ ಮಾಲಕರ ಸಂಘ ಸುರತ್ಕಲ್, ಪಿಕ್‌ಅಪ್ ಟೆಂಪೋ ಚಾಲಕರ ಮಾಲಕರ ಸಂಘ ಸುರತ್ಕಲ್, ದ.ಕ. ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಎಸೋಸಿಯೇಶನ್, ನಾಗರಿಕ ಹೋರಾಟ ಸಮಿತಿ ಜೋಕಟ್ಟೆ, ನಾಗರಿಕ ಸಮಿತಿ ಕುಳಾಯಿ, ನಾಗರಿಕ ಹೋರಾಟ ಸಮಿತಿ ಕಾನ, ಬಸ್ ಮಾಲಕರ ಸಂಘ ಕಿನ್ನಿಗೋಳಿ ವಲಯವು ಬೆಂಬಲ ಸೂಚಿಸಿತ್ತು.

ಧರಣಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವೈ.ರಾಘವೇಂದ್ರ ರಾವ್, ಸಂತೋಷ್ ಬಜಾಲ್, ಅಜ್ಮಾಲ್ ಕಾನ, ನವೀನ್ ಕೊಂಚಾಡಿ, ಮುಸ್ತಫಾ ಬೈಕಂಪಾಡಿ, ಬಸ್, ಲಾರಿ, ಟೆಂಪೊ, ಟ್ಯಾಕ್ಸಿ ಸಂಘಟನೆಗಳ ಪ್ರಮುಖರಾದ ಮೂಸಬ್ಬ ಪಕ್ಷಿಕೆರೆ, ರಹೀಂ ಪಕ್ಷಿಕೆರೆ, ದಿನೇಶ್ ಆರ್. ಕೆ., ಸಂದೀಪ್ ಕಿನ್ನಿಗೋಳಿ, ಮುನವ್ವರ್ ಕುತ್ತಾರ್, ಕಮಲಾಕ್ಷ ಸಾಲಿಯಾನ್, ಶಿವ ಪಂಜಿಮೊಗರು, ಉಮರ್ ಫಾರೂಕ್, ಜಾನ್ ಡಿಸೋಜ, ಪ್ರಕಾಶ್ ಸುರತ್ಕಲ್, ಸಮದ್ ಪಕ್ಷಿಕೆರೆ, ಹರೀಶ್ ಚಂದ್ರ, ಅಬೆಲ್ ಡಿಸೋಜ, ಅಬೂಬಕ್ಕರ್ ಬಾವಾ, ಲ್ಯಾನ್ಸಿ ಜೋಕಟ್ಟೆ, ಗಂಗಾಧರ ಬಂಜನ್, ಮುಸ್ಬಾ ಕೃಷ್ಣಾಪುರ, ಐ. ಮುಹಮ್ಮದ್, ಮಕ್ಸೂದ್ ಬಿ.ಕೆ., ರಾಜೇಶ್ ಶೆಟ್ಟಿ ಪಡ್ರೆ, ಪ್ರಮೋದ್ ಶೆಟ್ಟಿ, ರಶೀದ್ ಮುಕ್ಕ, ನಿತಿನ್ ಬಂಗೇರ ಮತ್ತಿತರರು ಪಾಲ್ಗೊಂಡಿದ್ದರು.

ಬಿ.ಕೆ. ಇಮ್ತಿಯಾಝ್ ಪ್ರಾಸ್ತಾವಿಕವಾಗಿ ಮಾತಾಡಿದರು. ಶ್ರೀನಾಥ್ ಕುಲಾಲ್ ಸ್ವಾಗತಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X