ಬಕ್ರೀದ್ ಹಬ್ಬ, ಕುರ್ಬಾನಿ ಆಚರಣೆಗೆ ಸೂಕ್ತ ಭದ್ರತೆಗಾಗಿ ದ.ಕ.ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು, ಆ. 14: ಸುಮಾರು ನಾಲ್ಕು ಸಾವಿರ ವರ್ಷಗಳಿಂದ ಇತಿಹಾಸವಿರುವ ಮುಸ್ಲಿಮ್ ಸಮುದಾಯ ಆಚರಿಸಿಕೊಂಡು ಬರುವ ಬಕ್ರೀದ್ ಹಬ್ಬ ಮತ್ತು ಕುರ್ಬಾನಿ ಧಾರ್ಮಿಕ ಆಚರಣೆಯಾಗಿದೆ.
ಕುರ್ಬಾನಿ ಆಚರಣೆಗೆ ಸಂವಿಧಾನದ ಅನುಮತಿಯೂ ನೀಡಿದೆ, ಮುಸ್ಲಿಮ್ ಸಮುದಾಯ ಹಬ್ಬದ ನಾಲ್ಕುದಿವಸಗಳಲ್ಲಿ ಮಸೀದಿ ಮದರಸಗಳ ಮತ್ತು ಖಾಸಗಿ ಸ್ಥಳಗಳಲ್ಲಿ ಇದನ್ನು ನಡೆಸಿ ಮಾಂಸ ವಿತರಣೆ ಮಾಡುತ್ತಾರೆ ಸಂವಿಧಾನ ಬದ್ದವಾದ ಈ ಕುರ್ಬಾನಿ ಆಚರಣೆಗೆ ಕೆಲವರು ಕಾನೂನು ಕೈಗೆತ್ತಿ ತಡೆಯೊಡ್ಡಿ ಸಮಾಜದಲ್ಲಿ ಗಲಭೆ ಹರಡುವ ಪ್ರಯತ್ನಕ್ಕೆ ತಯಾರಾಗುತ್ತಿದ್ದು ಕಂಡುಬರುತ್ತದೆ.
ಆದುದರಿಂದ ಈ ಬಾರಿಯ ಬಕ್ರೀದ್ ಹಬ್ಬ ಮತ್ತು ಕುರ್ಬಾನಿ ಆಚರಣೆಗೆ ಹೆಚ್ಚಿನ ಬಂದೋಬಸ್ತು ನೀಡಬೇಕು. ಶಾಂತಿಯುತವಾಗಿ ನಾಲ್ಕು ದಿವಸಗಳ ಹಬ್ಬ ಆಚರಿಸಲು ವ್ಯವಸ್ಥೆ ದ ಕ ಜಿಲ್ಲಾ ಇಮಾಮ್ಸ್ ಕೌನ್ಸಿಲ್ ತಂಡ ಜಿಲ್ಲಾಧಿಕಾರಿಗಳ ಕಛೇರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದೆ
ನಿಯೋಗದಲ್ಲಿ ಇಮಾಮ್ಸ್ ಕೌನ್ಸಿಲ್ ಮುಖಂಡರುಗಳಾದ ಜಾಫರ್ ಫೈಝೀ, ರಫೀಕ್ ದಾರಿಮಿ, ಹಾರಿಸ್ ಹನೀಫೀ, ಉಸ್ಮಾನ್ ಸಅದಿ, ಅಬ್ದುಲ್ಲಾ ಮುಸ್ಲಿಯಾರ್ ಉಪಸ್ಥಿತರಿದ್ದರು.





