ಕೆ.ಆರ್.ಪೇಟೆ: ಕಾಲುವೆಯಲ್ಲಿ ಕೊಚ್ಚಿಹೋದ ಮಹಿಳೆ
ಕೆ.ಆರ್.ಪೇಟೆ,ಆ.14: ತಾಲೂಕಿನ ಶೀಳನೆರೆ ಗ್ರಾಮದ ಬಳಿ ಮಹಿಳೆಯೊಬ್ಬರು ಹೇಮಾವತಿ ನದಿಯಲ್ಲಿ ಕಾಲು ಜಾರಿಬಿದ್ದು ಕೊಚ್ಚಿಹೋಗಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಗ್ರಾಮದ ಶಂಕರೇಗೌಡರ ಪತ್ನಿ ಸುಧಾಮಣಿ(50) ಕೊಚ್ಚಿ ಹೋದ ಮಹಿಳೆಯಾಗಿದ್ದು, ಈಕೆ ಜಮೀನಿನಲ್ಲಿ ಕೃಷಿಕಾರ್ಯ ಮುಗಿಸಿಕೊಂಡು ಕಾಲುವೆಯಲ್ಲಿ ಕೈಕಾಲು ತೊಳೆಯುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story