Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ವರುಣನ...

ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟಕ್ಕೆ ಕೃಷಿಕ ಬಲಿ

ಮಲ್ಪೆ-ಮೊಳಕಾಲ್ಮೂರು ರಾ.ಹೆದ್ದಾರಿಯಲ್ಲಿ ಸಂಚಾರ ಕಡಿತ

ವಾರ್ತಾಭಾರತಿವಾರ್ತಾಭಾರತಿ14 Aug 2018 10:44 PM IST
share
ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟಕ್ಕೆ ಕೃಷಿಕ ಬಲಿ

ಉಡುಪಿ, ಆ.14: ಉಡುಪಿ ಜಿಲ್ಲೆಯಲ್ಲಿ ವರುಣನ ಆರ್ಭಟ ಸತತ ಮೂರನೇ ದಿನವೂ ಮುಂದುವರಿದಿದ್ದು, ಕುಂದಾಪುರ ತಾಲೂಕು ಜನ್ಸಾಲೆ ಮಕ್ಕಿಮನೆಯ ಕೃಷಿಕರೊಬ್ಬರು ಅಕಸ್ಮಿಕವಾಗಿ ರಸ್ತೆ ಬದಿಯ ತೋಡಿಗೆ ಬಿದ್ದು ಮೃತಪಟ್ಟರೆ, ಭಾರೀ ಮಳೆಯಿಂದಾಗಿ ಸೀತಾನದಿಯಲ್ಲಿ ಪ್ರವಾಹ ಉಕ್ಕೇರಿ ಹರಿದು ಹೆಬ್ರಿ-ಸೋಮೇಶ್ವರ ನಡುವಿನ ಸೀತಾನದಿಯ ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ರಸ್ತೆ ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ.

ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಸತತವಾಗಿ ಸುರಿದ ಭಾರೀ ಮಳೆಯಿಂದ ಸೀತಾನದಿಯಲ್ಲಿ ಪ್ರವಾಹ ಬಂದಿದ್ದು, ಇದರಿಂದ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಹೆಬ್ರಿ ಸೀತಾನದಿ (ಊರು) ಬ್ರಹ್ಮಸ್ಥಾನದ ಬಳಿ ನೀರು ರಸ್ತೆಯ ಮೇಲೆ ಹರಿಯತೊಡಗಿತು. ಸಮಯ ಸರಿದಂತೆ ನೀರಿನ ಮಟ್ಟ ಎರುತಿದ್ದಂತೆ ರಸ್ತೆಯ ಮೇಲೆ ಬಸ್ ಸೇರಿದಂತೆ ಎಲ್ಲಾ ವಾಹನಗಳ ಸಂಚಾರವನ್ನು ಬಂದ್ ಮಾಡಲಾಯಿತು.

ಅಪರಾಹ್ನ 12ಗಂಟೆ ಸುಮಾರಿಗೆ ಬಂದ್ ಮಾಡಿದ ವಾಹನ ಸಂಚಾರವನ್ನು ನೀರಿನ ಮಟ್ಟ ಇಳಿಯದ ಕಾರಣ ಇಂದು ರಾತ್ರಿಯವರೆಗೂ ಪುನರಾರಂಭಿಸಿಲ್ಲ ಎಂದು ನಾಡ್ಪಾಲು ಗ್ರಾಪಂನ ವಿ.ಎ. ವಿನುತಾ ಎಚ್.ಆರ್. ತಿಳಿಸಿದರು. ಸೋಮೇಶ್ವರ, ಆಗುಂಬೆ, ಶಿವಮೊಗ್ಗಗಳಿಗೆ ತೆರಳುವ ವಾಹನಗಳಿಗೆ ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದವರು ತಿಳಿಸಿದರು.

ಸಂಚಾರ ಸಂಪೂರ್ಣ ಬಂದ್ ಆಗಿರುವುದರಿಂದ ಶಿವಮೊಗ್ಗ ಹಾಗೂ ಉಡುಪಿ ಕಡೆಗೆ ಹೋಗುವ ವಾಹನಗಳು ಸೋಮೇಶ್ವರದಿಂದ ಮಡಾಮಕ್ಕಿ-ಮಾಂಡಿ -ಮೂರುಕೈ -ಕುಚ್ಚೂರು ಮಾರ್ಗವಾಗಿ ಹೆಬ್ರಿಗೆ ಬಂದು ಉಡುಪಿ ಅಥವಾ ಶಿವಮೊಗ್ಗಕ್ಕೆ ತೆರಳುತ್ತಿವೆ. ಯಾವುದೇ ಅಪಾಯ, ಹಾನಿ ಸಂಭವಿಸಿಲ್ಲ ಎಂದು ವಿನುತಾ ಸ್ಪಷ್ಟ ಪಡಿಸಿದರು.

ಸೋಮವಾರ ರಾತ್ರಿ ಬೀಸಿದ ಗಾಳಿಯಲ್ಲಿ ಹೆಬ್ರಿ ಆಸುಪಾಸಿನ ಹಲವಾರು ಮರಗಳು ನೆಲಕ್ಕುರುಳಿವೆ. ಹಲವೆಡೆ ಮನೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿವೆ. ಕಳೆದ ವರ್ಷ ಇದಕ್ಕಿಂತ ಹೆಚ್ಚು ಮಳೆ ಬಂದಿದ್ದರೂ ಸೀತಾನದಿಯಲ್ಲಿ ರಸ್ತೆಗೆ ನೀರು ಬಂದಿರಲಿಲ್ಲ. ಹೆಬ್ರಿ ಪೊಲೀಸರು ಸ್ಥಳದಲ್ಲಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ತೋಡಿಗೆ ಬಿದ್ದು ಮೃತ್ಯು: ಇನ್ನೊಂದು ಕಡೆ ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿಯ ಈಡೂರು-ಕುಂಞಡಿ ಗ್ರಾಮದ ಜನ್ಸಾಲೆ ಮಕ್ಕಿಮನೆಯ ಕೃಷಿಕ ರಘುರಾಮ ಶೆಟ್ಟಿ (55) ಎಂಬವರು ನಿನ್ನೆ ಸಂಜೆ  ಸುಮಾರಿಗೆ ಭಾರೀ ಮಳೆಯಲ್ಲಿ ಈಡೂರು ಪೇಟೆಯಿಂದ ಜನ್ಸಾಲೆ ಮಕ್ಕಿಮನೆಯ ತನ್ನ ಮನೆಗೆ ಮಣ್ಣಿನ ರಸ್ತೆಯಲ್ಲಿ ನಡೆದು ಬರುತಿದ್ದಾಗ, ರಸ್ತೆ ಪಕ್ಕದ ಭಾರೀ ತೋಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪೇಟೆಗೆ ಹೋದ ಗಂಡ ರಾತ್ರಿಯಾದರೂ ಬಾರದಿದ್ದರಿಂದ ರಘುರಾಮ ಶೆಟ್ಟಿ ಅವರ ಪತ್ನಿ, ಪರಿಚಿತರಿಗೆ ತಿಳಿಸಿ ರಾತ್ರಿಯೇ ಹುಡುಕಾಡಿದರೂ ಎಲ್ಲೂ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಎಲ್ಲರೂ ಸೇರಿ ಮತ್ತೆ ಹುಡುಕಿದಾಗ ಮನೆಯಿಂದ 400ಮೀ. ದೂರದಲ್ಲಿ ರಸ್ತೆ ಪಕ್ಕದ ತೋಡಿನಲ್ಲಿ ಮೊದಲು ಅವರ ಒಂದು ಚಪ್ಪಲಿ ದೊರೆತು ಬಳಿಕ ಹುಡುಕಿದಾಗ 10 ಗಂಟೆ ಸುಮಾರಿಗೆ ಅಲ್ಲೇ ಪಕ್ಕದಲ್ಲಿ ಕೈಯಲ್ಲಿ ಇನ್ನೊಂದು ಚಪ್ಪಲಿ ಹಿಡಿದ ರಘುರಾಮ ಶೆಟ್ಟಿ ಅವರ ಮೃತದೇಹ ಪತ್ತೆಯಾಯಿತು ಎಂದು ತಿಳಿದುಬಂದಿದೆ.

ನಾವುಂದದಲ್ಲಿ 3 ಗಂಜಿ ಕೇಂದ್ರ: ಬೈಂದೂರು ತಾಲೂಕಿನ ಬಡಾಕೆರೆ, ಮರವಂತೆಗಳಲ್ಲಿ ಪ್ರವಾಹದಿಂದಾಗಿ 50ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. ಹೆಚ್ಚಿನವರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದು, ಉಳಿದವರಿಗಾಗಿ ಮೂರು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಬೈಂದೂರು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

ಬಡಾಕೆರೆಯ ಅಂಗನವಾಡಿಯಲ್ಲಿ ತೆರೆದ ಗಂಜಿಕೇಂದ್ರದಲ್ಲಿ 12 ಮಂದಿ ಈಗಾಗಲೇ ಆಶ್ರಯ ಪಡೆದಿದ್ದರೆ, ಮರವಂತೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗಂಜಿಕೇಂದ್ರದಲ್ಲಿ 10 ಮಂದಿ ಹಾಗೂ ನಾವುಂದ ಮಹಾಗಣಪತಿ ಕಲ್ಯಾಣಮಂಟಪದಲ್ಲಿ ತೆರೆದ ಗಂಜಿಕೇಂದ್ರಗಳಲ್ಲಿ ನೆರೆ ಪೀಡಿತರಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಮೂಲಗಳು ಹೇಳಿವೆ.

 36 ಲಕ್ಷ ರೂ.ಗಳಿಗೂ ಅಧಿಕ ನಷ್ಟ: ರವಿವಾರ ಹಾಗೂ ಸೋಮವಾರ ಸುರಿದ ಭಾರೀ ಮಳೆಗೆ ಉಡುಪಿ ಜಿಲ್ಲೆಯಲ್ಲಿ ಸುಮಾರು 65 ಪ್ರಕರಣಗಳಲ್ಲಿ 36 ಲಕ್ಷ ರೂ.ಗಳಿಗೂ ಅಧಿಕ ಮೊತ್ತ ಸೊತ್ತುಗಳಿಗೆ ಹಾನಿಯಾಗಿವೆ ಎಂದು ಜಿಲ್ಲಾ ಕಂಟ್ರೋಲ್ ರೂಮ್ ಮಾಹಿತಿ ನೀಡಿದೆ. ಇವುಗಳಲ್ಲಿ ಮನೆ, ಶಾಲೆಗಳಿಗೆ ಆದ ವಿವಿಧ ಪ್ರಮಾಣದ ಹಾನಿಯಲ್ಲದೇ, ಕೃಷಿ ಬೆಳೆಗಾದ ಹಾನಿಯೂ ಸೇರಿವೆ.

ಕುಂದಾಪುರ ತಾಲೂಕಿನಲ್ಲಿ ಆರು ಪ್ರಕರಣಗಳು ವರದಿಯಾಗಿದ್ದು 1.20 ಲಕ್ಷ ರೂ.ನಷ್ಟವಾಗಿದೆ. ಉಡುಪಿ ತಾಲೂಕಿನಲ್ಲಿ 19 ಪ್ರಕರಣಗಳು ವರದಿಯಾಗಿದ್ದು, ಇದರಿಂದ ಆದ ನಷ್ಟದ ಪ್ರಮಾಣ 7.17 ಲಕ್ಷ ರೂ.ಗಳೆಂದ ಅಂದಾಜಿಸಲಾಗಿದೆ. ಬ್ರಹ್ಮಾವರ ತಾಲೂಕಿನ ನಾಲ್ಕು ಪ್ರಕರಣಗಳಲ್ಲಿ ಉಂಟಾದ ನಷ್ಟದ ಪ್ರಮಾಣ 2.75 ಲಕ್ಷ ರೂ.ಗಳಾಗಿವೆ.

ಕಾಪು ತಾಲೂಕಿನಲ್ಲಿ 9 ಪ್ರಕರಣಗಳಲ್ಲಿ ಮನೆಗಳಿಗೆ ಸಂಪೂರ್ಣದಿಂದ ಭಾಗಶ: ಹಾನಿಯಾಗಿದ್ದು ಇದರಿಂದ 6 ಲಕ್ಷ ರೂ.ಗಳಿಗೂ ಅಧಿಕ ಸೊತ್ತುಗಳಿಗೆ ಹಾನಿಯಾಗಿವೆ. ಕಾರ್ಕಳ ತಾಲೂಕಿನಲ್ಲಿ ಅತ್ಯಧಿಕ ಪ್ರಮಾಣದ ಹಾನಿ ಸಂಭವಿಸಿದ್ದು, 26 ಪ್ರಕರಣಗಳಲ್ಲಿ 19 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.

ಇವುಗಳಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿಗಾದ ಹಾನಿಯೇ ಐದು ಲಕ್ಷ ರೂ.ಗಳಾಗಿವೆ ಎಂದು ತಾಲೂಕು ಕಚೇರಿಗಳಿಂದ ಮಾಹಿತಿ ಬಂದಿದೆ.
ಮಂಗಳವಾರ ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಹೊಳೆಯ ಅಂಚು ಕುಸಿದು ಜಯರಾಮ ಶೆಟ್ಟಿ ಹಾಗೂ ಭಾಸ್ಕರ ಶೆಟ್ಟಿ ಎಂಬವರ ಭತ್ತದ ಗದ್ದೆಗೆ ನೀರು ನುಗ್ಗಿದ್ದು ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಕೋಣಿ ಗ್ರಾಮದ ಕಿರುಸೇತುವೆಯ ತಡೆಗೋಡೆಗೆ ಹಾನಿಯಾಗಿದ್ದು ಎರಡೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ.

ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 17 ಸೆ.ಮೀ. ಮಳೆ ಸುರಿದಿದೆ. ನಾಳೆಯೂ ಇದೇ ರೀತಿಯಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X