ಮಂಡ್ಯ: ರಾಜ್ಯಮಟ್ಟದ ಕವಿಗೋಷ್ಠಿಗೆ ಆಹ್ವಾನ
ಮಂಡ್ಯ, ಆ.14: ದಿವ್ಯಜ್ಯೋತಿ ಕಲಾ ಮತ್ತು ಸಾಹಿತ್ಯ ವೇದಿಕೆ ವತಿಯಿಂದ ಗೌರಿಗಣೇಶ ಹಬ್ಬದ ಪ್ರಯುಕ್ತ ಸೆಪ್ಟಂಬರ್ 30ರಂದು ಬೆಳಗ್ಗೆ 10ಕ್ಕೆ ನಗರದ ಗಾಂಧಿಭವನದಲ್ಲಿ 11ನೇ ರಾಜ್ಯಮಟ್ಟದ ಕವಿಗೋಷ್ಠಿ, ವೇಷಭೂಷಣ, ಏಕಪಾತ್ರಾಭಿನಯ ಪ್ರದರ್ಶನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳಿಗೆ ಅಭಿನಂದನಾ ಪ್ರಶಸ್ತಿ ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಬಿ.ರಾಮೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಪತ್ರ ಪಡೆಯಲಿಚ್ಛಿಸುವ ಅರ್ಹ ವ್ಯಕ್ತಿಗಳು ಸೆ.10ರೊಳಗೆ ಎರಡು ಭಾವಚಿತ್ರ, ಹೆಸರು, ತಂದೆ-ತಾಯಿ ಹೆಸರು, ಹುಟ್ಟಿದ ದಿನಾಂಕ, ಊರು, ಜಿಲ್ಲೆ, ಮಾಡಿರುವ ಸಾಧನೆ, ಪ್ರಕಟಿಸಿರುವ ಕೃತಿಗಳು, ಸಮಾಜ ಸೇವೆ ಇತ್ಯಾದಿ ವಿವರಗಳನ್ನು ಎಂ.ಬಿ.ರಾಮೇಗೌಡ, ಜಿಲ್ಲಾಧ್ಯಕ್ಷರು, 2ನೇ ಅಡ್ಡರಸ್ತೆ, ಹೊಸಹಳ್ಳಿ ಮಂಡ್ಯ-571401ಗೆ ಕೊರಿಯರ್ ಮೂಲಕ ಕಳುಹಿಸಬೇಕು ಎಂದರು.
ಹೆಚ್ಚಿನ ಮಾಹಿತಿಗೆ ದೂ.:7795742351, 8095623286ಗೆ ಸಂಪರ್ಕಿಸಲು ಕೋರಿದರು. ಎಂ.ಆರ್.ಕುಮುದ, ರಾಣಿ ಹಾಗೂ ಡಾ.ಶಿವರಾಮು ಉಪಸ್ಥಿತರಿದ್ದರು.





