ಹನೂರು: ಹಸಿರು ಕರ್ನಾಟಕ ಆಂದೋಲನಕ್ಕೆ ಚಾಲನೆ

ಹನೂರು,ಆ.15: ಅರಣ್ಯ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮನೆಗೊಂದು ಮರ ಊರಿಗೊಂದು ತೋಪು ತಾಲೂಕಿಗೊಂದು ಕಿರು ಅರಣ್ಯ ಜಿಲ್ಲೆಗೊಂದು ಕಾಡು ಎಂಬ ಹಸಿರು ಕರ್ನಾಟಕ ಆಂದೋಲನಕ್ಕೆ ಹನೂರಿನ ಮಲೈಮಹದೇಶ್ವರ ಕ್ರೀಡಾಂಗಣದಲ್ಲಿ ಶಾಸಕ ನರೇಂದ್ರರಾಜುಗೌಡ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಪರಿಸರ ಸಂರಕ್ಷಣೆಗೆ ಅರಣ್ಯ ಇಲಾಖೆ ಕೈಗೊಂಡಿರುವ ಈ ಆಂದೋಲನಕ್ಕೆ ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಪರಿಸರ ಸಂರಕ್ಷಣೆ ಮಾಡದಿದ್ದರೆ ಭೂಮಿಯ ಮೇಲೆ ಮರಗಳು ಕ್ಷೀಣಿಸಿ ಹಸಿರು ಹೊದಿಕೆ ಕಡಿಮೆಯಾಗುವುದರಿಂದ ಪರಿಸರ ಮತ್ತು ಹವಾಮಾನದ ಮೇಲೆ ವೈಪರೀತ್ಯ ಪರಿಣಾಮವಾಗಿ ಮುಂದೊಂದು ದಿನ ಮಾನವನೇ ಇರುವುದಿಲ್ಲವೆಂದು ಅವರು ಆತಂಕ ವ್ಯಕ್ತ ಪಡಿಸಿದರು . ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಪ್ರತಿಜ್ಞಾ ವಿಧಿಯನ್ನು ಮಾಡಿಸಲಾಯಿತು.
ಈ ಸಂದರ್ಭ ತಾಪಂ ರಾಜು ಪಪಂ ಅಧ್ಯಕ್ಷೆ ಮಮತಾಮಹದೇವ, ತಾಪಂ ಉಪಾಧ್ಯಕ್ಷ ಲತರಾಜಣ್ಣ, ಬಸವರಾಜು, ರಾಜುಗೌಡ, ಬಾಲರಾಜನಾಯ್ಡು , ಡಿಎಫ್‍ಒ ಏಡುಕೊಂಡಲು, ತಹಶೀಲ್ದಾರ್ ಶಿವರಾಮ್ ಬಿಇಒ ಟಿಆರ್ ಸ್ವಾಮಿ, ಬಿಆರ್‍ಸಿ ಕ್ಯಾತ ರಾಜಶ್ವ ನೀರಿಕ್ಷಕರಾದ ಮಾದೇಶ್, ರಾಜಶೇಖರ್ , ಎಎಸ್‍ಎಫ್ ಪ್ರಶಾಂತ್, ಅಂಕರಾಜು, ಇನ್ನಿತರರು ಹಾಜರಿದ್ದರು.





