ಸಿದ್ದಾಪುರ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಗಿಡ ವಿತರಣೆ
ಸಿದ್ದಾಪುರ,ಆ.15: ಮುನ್ವಾರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 50ಕ್ಕೂ ಹೆಚ್ಚು ಗಿಡಗಳನ್ನು ವಿತರಿಸಿ ದೇಶ ಪ್ರೇಮದ ಜೊತೆಗೆ ಪರಿಸರ ಜ್ಞಾನ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಗಣ್ಯರು ಕರೆ ನೀಡಿದರು
ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಮುಸ್ತಫಾ ಹಾಜಿ ಧ್ವಜಾರೋಹಣ ನೆರವೇರಿಸಿ ಗಿಡಗಳನ್ನು ವಿತರಣೆ ಮಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಜ್ಞಾನದೊಂದಿಗೆ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು
ಈ ಸಂದರ್ಭ ಮಸೀದಿಯ ಖತೀಬ್ ನೌಫಲ್ ಹುದವಿ, ಮದರಸ ಮುಖ್ಯ ಶಿಕ್ಷಕ ಆರಿಫ್ ಫೈಝಿ, ಶಿಕ್ಷಕರುಗಳಾದ ಯೂಸೂಪ್ ಮುಸ್ಲಿಯಾರ್, ಮೊಯ್ದಿನ್, ಕರೀಂ ಮುಸ್ಲಿಯಾರ್, ಅಲವಿ ಮುಸ್ಲಿಯಾರ್, ಆಡಳಿತ ಮಂಡಳಿಯ ಪ್ರಮುಖರಾದ ಅಬ್ದುಲ್ ಕರೀಂ, ಸಮೀರ್, ಆಸ್ಕರ್, ಇಸ್ಮಾಯಿಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Next Story