ರೂಪಾಯಿ ಅಪಮೌಲ್ಯದಿಂದ ಕಿರು ಉದ್ಯಮ ನಾಶ: ಮಮತಾ ಬ್ಯಾನರ್ಜಿ

ಹೊಸದಿಲ್ಲಿ, ಆ.16: ರೂಪಾಯಿಯ ಅಪಮೌಲ್ಯವು ತೈಲ ಆಮದು ಬೆಲೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಲ್ಲದೆ ಈಗಾಗಲೇ ಅನಾಣ್ಯೀಕರಣದ ಹೊಡೆತದಿಂದ ಘಾಸಿಗೊಂಡಿರುವ ಸಣ್ಣ ವ್ಯಾಪಾರ ಕ್ಷೇತ್ರಕ್ಕೆ ಇನ್ನಷ್ಟು ಮಾರಕವಾಗಿ ಅದನ್ನು ನಾಶಗೊಳಿಸಲಿದೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಗುರುವಾರ ಡಾಲರ್ ಎದುರು ರೂಪಾಯಿ ವೌಲ್ಯ ಸಾರ್ವಕಾಲಿಕ ಕನಿಷ್ಟ ಮಟ್ಟ 70.22 ರೂ.ಗೆ ಕುಸಿದಿದೆ. ಬಳಿಕ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದೆ. ರೂಪಾಯಿ ವೌಲ್ಯ ಕುಸಿತದಿಂದ ರೈತರ ಸಮಸ್ಯೆಯೂ ಹೆಚ್ಚಲಿದೆ. ತರಕಾರಿಗಳ ಬೆಲೆ ಏರಲಿದೆ. ಈ ಹಿಂದೆ ನೋಟು ಅಪವೌಲ್ಯದ ಆಘಾತ, ಈಗ ರೂಪಾಯಿ ಅಪವೌಲ್ಯದ ಹೊಡೆತದಿಂದ ಅಸಾಂಪ್ರದಾಯಿಕ ಕ್ಷೇತ್ರ ಹಾಗೂ ಸಣ್ಣ ಉದ್ದಿಮೆಗಳು ಮತ್ತಷ್ಟು ವಿನಾಶದಂಚಿಗೆ ತಳ್ಳಲ್ಪಟ್ಟಿದೆ. ರೈತರ ಸಂಕಟ ಮತ್ತಷ್ಟು ಹೆಚ್ಚಲಿದೆ ಎಂದು ಮಮತಾ ಹೇಳಿದ್ದಾರೆ.
Next Story





