ಕೇರಳ ದುರಂತಕ್ಕೆ ಸಾಟಿಯಿಲ್ಲ:ರಾಹುಲ್ ಗಾಂಧಿ

ಹೊಸದಿಲ್ಲಿ,ಆ.16: ಶತಮಾನದ ಅತ್ಯಂತ ಭೀಕರ ಮಳೆಯಿಂದ ತತ್ತರಿಸಿರುವ ಕೇರಳಕ್ಕೆ ನೆರವಿಗೆ ಸಂಬಂಧಿಸಿದಂತೆ ತಾನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ ಎಂದು ಗುರುವಾರ ತಿಳಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು,ಕೇರಳದ ದುರಂತಕ್ಕೆ ಸಾಟಿಯೇ ಇಲ್ಲ ಎಂದು ಬಣ್ಣಿಸಿದರು.
ಕೇರಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಇನ್ನಷ್ಟು ಹೆಚ್ಚಿ ಸಂಖ್ಯೆಯಲ್ಲಿ ಸೇನಾ ಮತ್ತು ನೌಕಾಪಡೆ ಸಿಬ್ಬಂದಿಗಳನ್ನು ನಿಯೋಜಿಸುವಂತೆ ತಾನು ಮೋದಿಯವರನ್ನು ಕೋರಿಕೊಂಡಿದ್ದೇನೆ ಎಂದೂ ಅವರು ತಿಳಿಸಿದರು.
ಇದಕ್ಕೂ ಮುನ್ನ ಟ್ವೀಟೊಂದರಲ್ಲಿ ರಾಹುಲ್,ಪ್ರವಾಹ ಪೀಡಿತ ಕೇರಳಕ್ಕೆ ಹೆಚ್ಚಿನ ಆರ್ಥಿಕ ನೆರವಿಗಾಗಿ ಕೋರಿಕೊಂಡಿದ್ದರು.
Next Story





